ಧಾರವಾಡ –
ನವಂಬರ್ 2 ರಂದು ಉತ್ತರ ಕರ್ನಾಟಕ ಸಿವ್ಹಿಲ್ ಗುತ್ತಿಗೆದಾರರ ಸಂಘದಲ್ಲಿ ಲಕ್ಷ್ಮೀ ಪೂಜ – ದೀಪಾವಳಿ ಹಬ್ಬದ ಶುಭಾಶಯಗಳೊಂದಿಗೆ ಸರ್ವರಿಗೂ ಆಹ್ವಾನ ನೀಡಿದ್ದಾರೆ ಸಂಘದ ಅಧ್ಯಕ್ಷ ಸುಭಾಸ ಪಾಟೀಲ್
ಎಲ್ಲೇಡೆ ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕಾಗಿ ಭರದ ಸಿದ್ದತೆಗಳು ನಡೆದಿವೆ.ಹಬ್ಬಕ್ಕಾಗಿ ಇನ್ನೇನು ಒಂದೇ ವಾರ ಬಾಕಿ ಇರುವಾಗಲೇ ಪ್ರತಿಯೊಬ್ಬರು ಕೂಡಾ ಹಬ್ಬದ ಆಚರಣೆಗಾಗಿ ಭರ್ಜರಿಯಾದ ಸಿದ್ದತೆಯನ್ನು ಮಾಡಿ ಕೊಳ್ಳುತ್ತಿದ್ದು ಈ ಒಂದು ಬೆಳಕಿನ ಹಬ್ಬದಲ್ಲಿ ಲಕ್ಷ್ಮೀ ಪೂಜೆ ವಿಶೇಷವಾಗಿದ್ದು ಈ ಒಂದು ಪೂಜೆಯನ್ನು ಧಾರವಾಡದ ಉತ್ತರ ಕರ್ನಾಟಕ ಸಿವ್ಹಿಲ್ ಗುತ್ತಿಗೆದಾರರ ಸಂಘದಲ್ಲೂ ಹಮ್ಮಿಕೊಳ್ಳಲಾಗಿದೆ.
ಈ ಒಂದು ಲಕ್ಷ್ಮೀ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು ನವಂಬರ್ 2 ರಂದು ಈ ಧಾರವಾಡದ ಟೋಲ್ ನಾಕಾದಲ್ಲಿರುವ ಸಂಘದ ಕಚೇರಿಯಲ್ಲಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.ಸಂಜೆ 5 ಗಂಟೆಗೆ ಈ ಒಂದು ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ ಸಂಘದ ಅಧ್ಯಕ್ಷರಾಗಿರುವ ಸುಭಾಸ ಬಿ ಪಾಟೀಲ್ ಅವರು ಸಂಘಟನೆಯ ಸರ್ವ ಸದಸ್ಯರ ಪರವಾಗಿ ಶುಭಾಶಯಗಳನ್ನು ಕೋರಿ ಪೂಜೆಗೆ ಆಹ್ವಾನವನ್ನು ನೀಡಿದ್ದಾರೆ
ಉಪಾಧ್ಯಕ್ಷ ದೊಡ್ಡಬಸನಗೌಡ ಪಾಟೀಲ,ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾನೆ,ಖಂಜಾಂಚಿ ಆಸ್ಪಕ್ ಬೆಟಗೇರಿ,ಸದಸ್ಯರಾದ ಬಿ ಎನ್ ಪೊಲೀಸ್ ಪಾಟೀಲ್ ,ಬಿ ಎಮ್ ಪಾಟೀಲ್,ಎನ್ ಈರಣ್ಣ,ಕೆ ಎನ್ ಕಂಕಾಳೆ, ತಿರ್ಲಾಪೂರ,ಅಶೋಕ ಪಾಟೀಲ್,ಸೇರಿದಂತೆ ಹಲವರು ಸ್ವಾಗತ ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..