ಕುಂದಗೋಳ –
BJP ಮಡಿಲಿಗೆ ಕುಂದಗೋಳ ಪಟ್ಟಣ ಪಂಚಾಯತಿ ಶಾಸಕ MR ಪಾಟೀಲ್ ಮಾಸ್ಟರ್ ಪ್ಲಾನ್ ಅಧ್ಯಕ್ಷರಾಗಿ ಶ್ಯಾಮಸುಂದರ ದೇಸಾಯಿ,ಉಪಾಧ್ಯಕ್ಷರಾಗಿ ಮಂಜುನಾಥ ಹಿರೇಮಠ
ನಿರೀಕ್ಷೆಯಂತೆ ಕುಂದಗೋಳ ಪಟ್ಟಣ ಪಂಚಾಯತಿ ಅಧಿಕಾರವನ್ನು ಬಿಜೆಪಿ ಪಕ್ಷವು ತನ್ನ ಮಡಿಲಿಗೆ ಹಾಕಿಕೊಂಡಿದೆ.ಹೌದು ನಡೆದ ಚುನಾವಣೆಯಲ್ಲಿ ಕುಂದಗೋಳ ಪಟ್ಟಣ ಪಂಚಾಯತಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ಯಾಮಸುಂದರ ದೇಸಾಯಿ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ ಹಿರೇಮಠ ಅವಿರೋಧವಾಗಿ ಆಯ್ಕೆ ಯಾದರು.
ಬಿಜೆಪಿ ಪಕ್ಷಕ್ಕೆ ಅಧಿಕಾರವು ಮಡಿಲಿಗೆ ಸಿಗುತ್ತಿದ್ದಂತೆ ನೂತನ ಅಧ್ಯಕ್ಷರು,ಉಪಾಧ್ಯಕ್ಷರಿಗೆ ಪಕ್ಷದ ಸಮಸ್ತ ಕಾರ್ಯಕರ್ತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸ ಲಾಯಿತು.ಇನ್ನೂ ಅವಿರೋಧವಾಗಿ ಆಯ್ಕೆ ಆಗಲು ಕಾರಣಿಬೂತರಾದ ಕುಂದಗೋಳ ತಾಲ್ಲೂಕಿನ ಜನಪ್ರಿಯ ಶಾಸಕರಾದ ಎಂ ಆರ್ ಪಾಟೀಲ,ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ, ಚುನಾವಣೆ ವೀಕ್ಷಕರಾದ ಈರಣ್ಣ ಜಡಿ, ಮಾಲತೇಶ ಶ್ಯಾಗೊಟಿ ಪಟ್ಟಣ ಪಂಚಾಯತಿಯ ಎಲ್ಲಾ ಸದಸ್ಯರಿಗೆ ಹಾಗೂ ಪಕ್ಷದ ಕುಂದಗೋಳ ನಗರದ ಮುಖಂಡರಿಗೆ, ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..