This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಗದಗ

ರಾಜ್ಯದ ನೌಕರರಿಗೂ ಕೇಂದ್ರ ಮಾದರಿ ವೇತನ ಜಾರಿ ಆಗುವವರೆಗೂ ವಿಶ್ರಮಿಸುವುದಿಲ್ಲ ಷಡಾಕ್ಷರಿ ಘೋಷಣೆ – ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಆತ್ಮವಿಶ್ವಾಸ ತುಂಬಿದ ರಾಜ್ಯಾಧ್ಯಕ್ಷರ ಮಾತುಗಳು…..

ರಾಜ್ಯದ ನೌಕರರಿಗೂ ಕೇಂದ್ರ ಮಾದರಿ ವೇತನ ಜಾರಿ ಆಗುವವರೆಗೂ ವಿಶ್ರಮಿಸುವುದಿಲ್ಲ ಷಡಾಕ್ಷರಿ ಘೋಷಣೆ – ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಆತ್ಮವಿಶ್ವಾಸ ತುಂಬಿದ ರಾಜ್ಯಾಧ್ಯಕ್ಷರ ಮಾತುಗಳು…..
WhatsApp Group Join Now
Telegram Group Join Now

ಗದಗ

ನೌಕರರು ಒತ್ತಡದ ನಡುವೆಯೇ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ ರಾಜ್ಯವು ದೇಶದ ಆದಾಯ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದ್ದರೂ ಬೇರೆ ರಾಜ್ಯಗಳಿಗಿಂತ ಕಡಿಮೆ ಸಂಬಳ ಇದೆ ಕೇಂದ್ರ ಮಾದರಿಯ ಸಂಬಳ ರಾಜ್ಯ ನೌಕರರಿಗಿಲ್ಲ. ಕೇಂದ್ರ ಮಾದರಿ ವೇತನ ಜಾರಿ ಆಗುವವರೆಗೂ ವಿಶ್ರಮಿಸುವುದಿಲ್ಲ ಎಂದು ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದರು.

ಗದಗ ನಗರದ ಭೀಮಸೇನ ಜೋಶಿ ರಂಗಮಂದಿರದಲ್ಲಿ ಏರ್ಪಡಿಸಿದ್ದ ರಾಜಾಧ್ಯಕ್ಷ ಸಿ.ಎಸ್. ಷಡಕ್ಷರಿಯವರ ಸನ್ಮಾನ ಕಾರ್ಯಕ್ರಮ ಹಾಗೂ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆಗಳೇ ಇಲ್ಲ. ಸದ್ಯದಲ್ಲೇ ಹೊಸ ಆರೋಗ್ಯ ಯೋಜನೆ ನಗದು ರಹಿತ ಜಾರಿ ಮಾಡಲು ಸರ್ಕಾರ ದೊಂದಿಗೆ ಅಂತಿಮ ಮಾತುಕತೆ ನಡೆದಿದೆ.

ಪಾರದರ್ಶಕ ಆಡಳಿತ ವ್ಯವಸ್ಥೆ ಇದ್ದರೆ ಇದೆಲ್ಲವೂ ಸಾಧ್ಯವಿದೆ. ಎಂದರು. ಸಂಘದ ಇತಿಹಾಸ ಅರಿಯ ದವರು, ಸಂಘದ ಆಳ ಅಗಲ ಗೊತ್ತಿಲ್ಲದವರು, ಇಲಾಖೆ ಬಗ್ಗೆ ಮಾಹಿತಿ ಇಲ್ಲದವರೂ ಚುನಾವಣೆಯಲ್ಲಿ ಸ್ಪರ್ಧಿಸು ತ್ತಿದ್ದಾರೆ. ಸಂಘದ ಕೆಲಸಗಳನ್ನು ಗುರುತಿಸದೇ ಮತ ಚಲಾಯಿಸಲಾಗುತ್ತಿದೆ. ಹೀಗಿದ್ದಾಗ ಚುನಾವಣೆಗೆ ಯಾಕೆ ನಿಲ್ಲಬೇಕು ಎಂದು ನೋವಾಗುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ರವಿ ಗುಂಜೀಕರ ಮಾತನಾಡಿ, ಏಳನೇ ವೇತನ ಆಯೋಗ ರಚಿಸುವಲ್ಲಿ ರಾಜಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ಪಾತ್ರ ದೊಡ್ಡದಿದೆ. ಆಯೋಗ ರಚನೆ ನಂತರ ಸರ್ಕಾರ ಬದಲಾದರೂ ಏಳನೇ ವೇತನ ಆಯೋಗ ಜಾರಿ ಆಗಲು ಶ್ರಮಿಸಿದರು. 2025ರಲ್ಲಿ ಎನ್‌ಪಿಎಸ್ ಬದಲಾಗಿ ಓಪಿಎಸ್ ಜಾರಿ ಮಾಡಲು ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುವ ಕಾರ್ಯವನ್ನು ಷಡಕ್ಷರಿ ಅವರು ಮಾಡಿದ್ದಾರೆ. ನೌಕರ ಪರವಾಗಿ ಇರುವ ನಾಯಕರನ್ನು ನಾವು ಆಯ್ಕೆ ಮಾಡಬೇಕೆಂದರು

ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸಂಘವು ಸ್ಥಾಪಿತವಾಗಿ 104 ಕಳೆದವು. ಇಷ್ಟು ಅವಧಿ ಯಲ್ಲಿ ಅತೀ ಹೆಚ್ಚು ಪರಿಣಾಮಕಾರಿ ಕೆಲಸ ಮಾಡಿದ ವರು ಸಿ.ಎಸ್. ಷಡಕ್ಷರಿ. ಭವಿಷ್ಯದಲ್ಲಿ ಅವರ ಮಾರ್ಗದರ್ಶನದಲ್ಲಿ ಸಂಘದ ಹಲವು ಉತ್ತಮ ಕಾರ್ಯಗಳು ನಡೆಯುತ್ತವೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಿ.ಎಸ್. ಷಡಕ್ಷರಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಡೊಳ್ಳು ಕುಣಿತ, ಕುಂಭಮೇಳದೊಂದಿಗೆ ತರಲಾಯಿತು. ವೇದಿಕೆಯಲ್ಲಿ ಕಲಾತಂಡಗಳಿಂದ ನೃತ್ಯ ಕಾರ್ಯಕ್ರ ಮಗಳು ಜರುಗಿದವು.

ಬಸವರಾಜ ಬಳ್ಳಾರಿ, ಎಸ್. ಎಫ್, ಸಿದ್ದನಗೌಡರ, ಬಿ.ಎ. ಕುಂಬಾರ, ವಿರೇಶ ಒಡೆಯನಪುರ, ಶಿವಾನಂದ ಎಂ. ಬಿ.ಟಿ. ವಾಲ್ಮೀಕಿ, ಎಂ.ಎನ್. ನಿಟ್ಟಾಲಿ, ಸಿದ್ದಪ್ಪ ಲಿಂಗದಾಳ, ಮಾರುತಿ ಮಂಗಳಾಪುರ, ಎಂ.ಎ. ಹಾದಿಮನಿ, ನಾಗರಾಜ ಜೆ. ಎಸ್.ಬಿ. ದಾನಪ್ಪಗೌಡರ, ಮಲ್ಲಿಕಾರ್ಜುನ ಹಿರೇಮಠ, ನಾಗರಾಜ ಹಳ್ಳಿಕೇರಿ, ಶಿವಪ್ಪ ಹದ್ದಿ ಸೇರಿದಂತೆ ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಸದಸ್ಯರು ಇದ್ದರು.

ಸುದ್ದಿ ಸಂತೆ ನ್ಯೂಸ್ ಗದಗ…..


Google News

 

 

WhatsApp Group Join Now
Telegram Group Join Now
Suddi Sante Desk