ವಾಹನಗಳಿಗೆ ದಂಡ ಹಾಕುವಾಗ ಸಾವಿಗೀಡಾದ ‘ASI’ ಪೊಲೀಸ್ ಅಧಿಕಾರಿ…..

Suddi Sante Desk

ಬೆಂಗಳೂರು –

ವಾಹನಗಳಿಗೆ ದಂಡವನ್ನು ವಿಧಿಸುವಾಗ ಸಂಚಾರಿ ಪೊಲೀಸ್ ಠಾಣೆಯ ಎಎಸ್ ಐ ರೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ‌. ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನಗಳಿಗೆ ದಂಡ ವಿಧಿಸುತ್ತಿದ್ದ ಸಹಾಯಕ ಸಬ್‌ ಇನ್ಸ್ಪೆಕ್ಟರ್ ತೀವ್ರ ಹೃದಯಘಾತದಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯಣ್ಣ ಮೃತಪಟ್ಟವರಾಗಿದ್ದಾರೆ ಮೂಲತಃ ಚಿಕ್ಕಮಗಳೂರಿನವರದಾದ ಇವರು ಅತಿ ವೇಗವಾಗಿ ಚಲಿಸುತ್ತಿದ್ದ ವಾಹನಗಳನ್ನು ತಡೆದು ದಂಡ ಹಾಕುತ್ತಿದ್ದರು.

ಕೂಡಲೇ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಿರಿಯಣ್ಣನ ನಿಧನಕ್ಕೆ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಚಿಕ್ಕಮಗಳೂರಿನವರಾದ ಹಿರಿಯಣ್ಣ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.