ಧಾರವಾಡ –
ಸರಣಿ ಅಪಘಾತವೊಂದು ಧಾರವಾಡದಲ್ಲಿ ನಡೆದಿದೆ. ಧಾರವಾಡದ ಬೆಳಗಾವಿ ರಸ್ತೆಯ ಕೃಷಿ ವಿಶ್ವವಿದ್ಯಾಲಯದ ಎತ್ತಿನಗುಡ್ಡದ ಕ್ರಾಸ್ ನಲ್ಲಿ ಅಪಘಾತವಾಗಿದೆ.

ಎತ್ತಿನಗುಡ್ಡದಿಂದ ಮುಖ್ಯ ರಸ್ತೆಗೆ ಕಾರೊಂದು ಬಂದಿದೆ. ಕಾರು ಬರುತ್ತಿದ್ದಂತೆ ಈ ಕಾರಿಗೆ ಕಾರೊಂದು ಮೊದಲು ಡಿಕ್ಕಿಯಾಗಿದೆ.

ಕಾರಿಗೆ ಕಾರು ಡಿಕ್ಕಿಯಾಗುತ್ತಿದ್ದಂತೆ ಡಿಕ್ಕಿಯಾದ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿದೆ.ಹೀಗೆ ನೋಡು ನೋಡುತ್ತಲೇ ಮೂರು ನಾಲ್ಕು ಕಾರುಗಳು ಡಿಕ್ಕಿಯಾಗಿ ಸರಣಿ ಅಪಘಾತವಾಗಿವೆ.

ಒಂದು ವಾಹನ ಚಾಲಕನಿಂದ ಆದ ಎಡವಟ್ಟಿನಿಂದಾಗಿ ರಸ್ತೆಯಲ್ಲಿ ಜೋರಾಗಿ ಹೊರಟಿದ್ದ ಕಾರುಗಳು ಡಿಕ್ಕಿಯಾಗಿವೆ.

ಇನ್ನೂ ಹೀಗೆ ಸರಣಿ ಅಪಘಾತದ ಸುದ್ದಿ ತಿಳಿದ ಧಾರವಾಡದ ಸಂಚಾರಿ ಪೊಲೀಸ್ ಠಾಣೆ ASI A S ಮೇದಾರ,ಮಹಾಂತೇಶ ಶೇತಸಂಧಿ,H D ರಂಗನ್ನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಒಟ್ಟಾರೆ ಸರಣಿ ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಏನೇ ಆಗಲಿ ದೊಡ್ಡ ಪ್ರಮಾಣದಲ್ಲಿ ದುರಂತವೊಂದು ತಪ್ಪಿದೆ.