ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಭೇಟಿಗೆ ಮತ್ತೊಮ್ಮೆ ನ್ಯಾಯಾಲಯ ಅವಕಾಶ ನೀಡಿದೆ. ಬೇಟೆಗೆ ಅವಕಾಶ ನೀಡುವಂತೆ ಕುಟುಂಬ ವರ್ಗದವರು ನ್ಯಾಯಾಲಯಕ್ಕೆ ಕೇಳಿದ್ದರು.

ವಿಚಾರಣೆ ಮಾಡಿದ ನ್ಯಾಯಾಲಯ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಭೇಟಿಯಾಗಲು ಕುಟುಂಬದವರಿಗೆ ಅವಕಾಶ ನೀಡಿದೆ. ಇಂದು ಸಂಜೆ 4 ಘಂಟೆಗೆ ಭೇಟಿಗೆ ಅವಕಾಶವನ್ನು ನೀಡಿದ್ದು ಹೀಗಾಗಿ ಪತ್ನಿ ಶಿವಲೀಲಾ ಮಕ್ಕಳು ಹಾಗೇ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಸೇರಿದಂತೆ ಕುಟುಂಬ ವರ್ಗದವರು ಬೆಳಗಾವಿಗೆ ತೆರಳಲಿದ್ದಾರೆ.

ಸಧ್ಯ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು ಹೀಗಾಗಿ ಸಂಜೆ 4 ಘಂಟೆಯಿಂದ 5 ಘಂಟೆಯವರಿಗೆ ಅವರ ಭೇಟಿಗಾಗಿ ಅವಕಾಶವನ್ನು ನೀಡಿದ ಹಿನ್ನಲೆಯಲ್ಲಿ ಒಂದು ಘಂಟೆಗಳ ಕಾಲ ಕುಟುಂಬ ವರ್ಗದವರು ಭೇಟಿಯಾಗಲಿದ್ದಾರೆ.

ಕಳೆದ ತಿಂಗಳ ಅಂದರೆ ಡಿಸೆಂಬರ್ 10 ರಂದು ಕುಟುಂಬದವರು ಭೇಟಿಯಾಗಿದ್ದರು ಮತ್ತೆ ಇಂದು ಎರಡನೇಯ ಬಾರಿಗೆ ಭೇಟಿಗೆ ಅವಕಾಶವನ್ನು ನೀಡಿದ್ದು ಹೀಗಾಗಿ ಭೇಟಿಯಾಗಲಿದ್ದಾರೆ.

ಇವೆಲ್ಲದರ ನಡುವೆ ಮತ್ತೊಂದೆಡೆ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರಿಗೂ ಕೂಡಾ ಭೇಟಿಗೆ ಅವಕಾಶವನ್ನು ನೀಡಿದ್ದು ಹೀಗಾಗಿ ಕುಟುಂಬ ವರ್ಗದವರು ಕೂಡಾ ಅವರನ್ನು ಭೇಟಿಯಾಗಲಿದ್ದಾರೆ.