ಹುಬ್ಬಳ್ಳಿ –
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ನವನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೊಲೆರೊ ವಾಹನದಲ್ಲಿ ಪಡಿತರ ಅಕ್ಕಿಯನ್ನು ತುಂಬಿಕೊಂಡು ಹೊಗುತ್ತಿದ್ದ ವಾಹನವನ್ನು ಪೊಲೀಸರು ದಾಳಿ ಮಾಡಿ ವಶಕ್ಕೆ ತಗೆದುಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳ ಸೂಚನೆಯ ಹಿನ್ನಲೆಯಲ್ಲಿ ಮಾಹಿತಿ ಪಡೆದುಕೊಂಡು ನವನಗರದ ಬಳಿ ವಶಕ್ಕೆ ಪಡೆಯಲಾಯಿತು.ಎಪಿಎಂಸಿ ಮತ್ತು ನವನಗರ ಠಾಣೆ ಪೊಲೀಸರೊಂದಿಗೆ ಆಹಾರ ನಿರೀಕ್ಷಕರಿಂದ ಈ ಒಂದು ದಾಳಿ ನಡೆದಿದೆ. 70,400 ರೂ. ಮೌಲ್ಯದ 32 ಕ್ವಿಂಟಲ್ ಅಕ್ಕಿ ಬ್ಯಾಗಗಳನ್ನು ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.

ಇನ್ನೂ ಈ ಒಂದು ಪ್ರಕರಣ ಕುರಿತು ಬೊಲೆರೋ ಚಾಲಕ ಸೇರಿದಂತೆ ಮೂವರ ಮೇಲೆ ನವನಗರ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಗೂಡ್ಸ್ ಗಾಡಿಯಲ್ಲಿ ಪಡಿತರ ಅಕ್ಕಿ ತುಂಬಿಕೊಂಡು ಸಾಗಣೆ ಮಾಡುತ್ತಿದ್ದಾಗ ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ದಾಳಿ ಮಾಡಿದ್ದಾರೆ.