ACB ಬಲೆಗೆ PDO ನಿವೇಶನ ಸ್ವತ್ತು ಮಾಡಿಸಲು ಹಣದ ಡಿಮ್ಯಾಂಡ್ ಮಾಡಿದ್ದವ ಟ್ರ್ಯಾಪ್…..

Suddi Sante Desk

ಚಿತ್ರದುರ್ಗ –

ನಿವೇಶನದ ಇ-ಸ್ವತ್ತು ಮಾಡಿಸಲು ಹಣದ ಬೇಡಿಕೆ ಇಟ್ಟಿದ್ದ PDO ಯೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ತಾಳ್ಯ ಗ್ರಾಮ ಪಂಚಾಯತಿ ಪಿಡಿಒ 2000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ  ಶ್ರೀಮೂರ್ತೆಪ್ಪ 45 ವರ್ಷ, ನೇರಳಕಟ್ಟೆ ನಿವಾಸಿ ಇವರು ಎಸಿಬಿ ಗೆ ಮತ್ತು ಪೊಲೀಸ್ ಠಾಣೆಗೆ ಹಾಜರಾಗಿ ದೂರನ್ನು ನೀಡಿದ್ದರು.

ಚಿತ್ರದುರ್ಗ ಠಾಣೆಯಲ್ಲಿ ನೀಡಿದ ದೂರಿನ ಹಿನ್ನಲೆಯಲ್ಲಿ ಮತ್ತು ಸಾರಾಂಶದ ಮೇಲೆ ತಾಳ್ಯ ಗ್ರಾಮ ಪಂಚಾಯತಿ ಪಿಡಿಒ ರವರ ಮೇಲೆ ಲಂಚದ ಹಣದ ಬೇಡಿಕೆ ಬಗ್ಗೆ ಮೊ.ಸಂ.07/2021 ಕಲಂ 7 (a) PC act ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿ ಎಸಿಬಿ ತಂಡವು ತಮ್ಮ ತಂಡದೊಂದಿಗೆ ತಾಳ್ಯ ತಲುಪಿ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಸಿ. ಪ್ರದೀಪ್ ಕುಮಾರ್ 37 ವರ್ಷ, ರವರು ತಮ್ಮ ಕಚೇರಿಯಲ್ಲಿಯೇ ದೂರುದಾರರಿಂದ 2000/- ರೂ ಲಂಚದ ಹಣ ಸ್ವೀಕರಿಸುವ ಸಮಯದಲ್ಲಿ ಎಸಿಬಿ ತಂಡದ ಬಲೆಗೆ ಕೆಡವಿದ್ದಾರೆ.ಈ ಒಂದು ಕಾರ್ಯಾಚ ರಣೆಯು ಎಸಿಬಿ ಹಿರಿಯ ಅಧಿಕಾರಿಗಳ ಮಾರ್ಗದ ರ್ಶನದಲ್ಲಿ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.