ಆ ಹೊಟೇಲ್ ನಲ್ಲಿ ವೇಶ್ಯಾವಾಟಿಕೆ ಮೂವರ ಬಂಧನ – ಪೊಲೀಸರ ಕಾರ್ಯಾಚರಣೆ

Suddi Sante Desk

ಉಡುಪಿ –

ಈ ಹಿಂದೆ ಹತ್ಯೆಯಾಗಿದ್ದ ಉದ್ಯಮಿ ಭಾಸ್ಕರ್‌ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಒಡೆತನದ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ಜಾಲಪತ್ತೆಯಾಗಿದೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.

ರಾಜೇಶ್ವರಿ ಶೆಟ್ಟಿ ಮಾಲೀಕತ್ವದ ಹೋಟೆಲ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆಯಾಗಿದೆ. ಆರೋಪಿಗಳಾ ದ ಶೇಖರ ಶೆಟ್ಟಿ, ಜಾನ್ಸನ್ ಡಿ ಅಲ್ಮೇಡಾ, ಹರ್ಷಿತ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದು ವಶಕ್ಕೆ ತೆಗೆದು ಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜೇಶ್ವರಿ ಶೆಟ್ಟಿ ಮೇಲೆಯೂ ಪ್ರಕರಣವನ್ನು ದಾಖಲು ಮಾಡಲಾಗಿದೆ.ರಾಜೇಶ್ವರಿ ಶೆಟ್ಟಿ ಸೇರಿದಂತೆ ಮೂವರ ಬಂಧನ ಬಾಕಿ ಇದೆ. ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.