ಬೆಂಗಳೂರು –
ಎಸಿಬಿ ದಾಳಿಗೆ ತುತ್ತಾಗಿದ್ದ ಕೆಎಎಸ್ ಅಧಿಕಾರಿ ಸುಧಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ಆದಾಯಕ್ಕೂ ಮೀರಿ ಆಸ್ತಿ ಗಳಿಗೆ ಆರೋಪವನ್ನು ಹೊತ್ತಿದ್ದ ಕೆಎಎಸ್ ಅಧಿಕಾರಿ ಸುಧಾ ಅವರ ಮೇಲೆ acb ದಾಳಿಯಾಗಿತ್ತು. ದಾಳಿಯ ನಂತರ ಈಗ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕೇಸ್ ಕ್ಲೋಸ್ ಮಾಡುವಂತೆ ಎಸಿಬಿ ಅಧಿಕಾರಿಗಳಿಗೆ ನಿರಂತರವಾಗಿ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕಳೆದ ವರ್ಷ ಜೂ.18 ರಂದು ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಾಹಂ ಅವರು ಸುಧಾ ವಿರುದ್ಧ ಲೋಕಾಯುಕ್ತ ವಿಶೇಷನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಸುಧಾ ಅವರು ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ್ದಾರೆಂದು ದೂರಿದ್ದರು, ಸುಧಾ ಅವರ ಮೇಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಎಸಿಬಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಎಸಿಬಿ ಅಧಿಕಾರಿಗಳು ಆಗಸ್ಟ್ 27 ರಂದು ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ನವೆಂಬರ್ 7 ರಂದು ಸುಧಾ ಹಾಗೂ ಅವರ ಆಪ್ತರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಎಸಿಬಿ ದಾಳಿ ವೇಳೆ 200ಕ್ಕೂ ಹೆಚ್ಚು ದಾಖಲೆ ಪತ್ರಗಳು ಸಿಕ್ಕಿದ್ದವು, ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡ ಎಸಿಬಿ ಅಧಿಕಾರಿಗಳು, ನಿರಂತರವಾಗಿ ತನಿಖೆ ನಡೆಸುತ್ತಿದ್ದರು ಈ ವೇಳೆ ಎಸಿಬಿ ಅಧಿಕಾರಿಗಳ ಮೇಲೆ ಕೇಸ್ ಕ್ಲೋಸ್ ಮಾಡುವಂತೆ ನಿರಂತರ ಒತ್ತಡ ಬಂದಿದೆ. ಈ ಬೆನ್ನಲ್ಲೆ ಸುಧಾ ಅವರನ್ನು ಸಸ್ಪೆಂಡ್ ಸದ್ಯ ಸೇವೆಯಿಂದ ಅಮಾನತು ಮಾಡಲಾಗಿದೆ. ಬೆಂಗಳೂರು ಬಿಡಿಎ ಯಲ್ಲಿ ಅಧಿಕಾರಿಯಾಗಿದ್ದ ವೇಳೆ ಸುಧಾ ಮಧ್ಯವರ್ತಿಗಳ ಜೊತೆಗೆ ಸೇರಿ ಹಣ ಗಳಿಸಿ
ದ್ದಾರೆ ಎಂಬ ಹಲವು ಆರೋಪಗಳಿವೆ.