ಆ ಸಿಡಿ ಯಲ್ಲಿನ ಯುವತಿಯ ಸುಳಿವು ಸಿಕ್ಕಿದೆ ಬೆಳಗಾವಿಯ ಪೊಲೀಸರಿಗೆ – ಪ್ರಕರಣದಲ್ಲಿ ಕೊನೆಗೂ ಪತ್ತೆಯಾದಳಾ ಆ ಲೇಡಿ

Suddi Sante Desk

ಬೆಳಗಾವಿ –

ರಮೇಶ್ ಜಾರಕಿಹೊಳಿ ಜೊತೆ ವಿಡಿಯೋದಲ್ಲಿದ್ದಾರೆ ಎನ್ನಲಾದ ಯುವತಿ ಬಗ್ಗೆ ಕೊನೆಗೂ ಬೆಳಗಾವಿ ಪೊಲೀಸರಿಗೆ ಮಹತ್ವದ ಸುಳಿವೊಂದು ಸಿಕ್ಕಿದೆ. ಹೌದು ರಾಸಲೀಲೆ ಪ್ರಕರಣದ‌ ಸಿಡಿ ಬಹಿರಂಗವಾದ ನಂತರ ಯುವತಿ ನಾಪತ್ತೆ ಆಗಿದ್ದಾಳೆ. ಪ್ರಕರಣ ಬೆಳಕಿಗೆ ಬಂದು 14 ದಿನಗಳ ನಂತ್ರ ಯುವತಿಯ ಪೋಷಕರು ಇಲ್ಲಿನ ಎಪಿಎಂಸಿ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದರು.

ಕೇಸ್ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಮಹಾನಗರ ಪೊಲೀಸರು ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ತಂಡ ರಚಿಸಿ‌ ಯುವತಿಗಾಗಿ ಶೋಧ ಕೈಗೊಂಡಿದ್ದಾರೆ. ತನಿಖೆ ಚುರುಕುಗೊಳಿಸಿದ ಮಹಾನಗರ ಪೊಲೀಸರಿಗೆ ಯುವತಿ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ. ಯುವತಿ ಬಳಸುತ್ತಿದ್ದ ಮೊಬೈಲ್ ಕೊನೆಯ ಸಲ ಆಕ್ಟಿವ್ ಆಗಿದ್ದು, ದೆಹಲಿಯಲ್ಲಿ ಎಂಬುವುದು ಗೊತ್ತಾಗಿದೆ.ಈ ಸಂಗತಿಯನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಸಿಡಿ ಬಿಡುಗಡೆ ಆಗಿ ಕೆಲ ದಿನ ಬೆಂಗಳೂರಿನಲ್ಲಿದ್ದ ಯುವತಿ ಬಳಿಕ ದೆಹಲಿಗೆ ತೆರಳಿದ್ದಳು ಎಂಬುದು ತನಿಖೆಯಿಂದ ದೃಢಪಟ್ಟಿದೆ. ಯುವತಿ ಪತ್ತೆಗಾಗಿ ಈಗಾಗಲೇ ಬೆಂಗಳೂರಿಗೆ ತೆರಳಿರುವ ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದೆ. ಯುವತಿಯ ಫೋನ್ ಕೊನೆಯ ಬಾರಿ ದೆಹಲಿಯಲ್ಲಿ ಆಕ್ಟಿವ್ ಆಗಿರುವ ಕಾರಣ ಬೆಳಗಾವಿ ಪೊಲೀಸರು ದೆಹಲಿಗೂ ಹೋಗುವ ಸಾಧ್ಯತೆ ದಟ್ಟವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.