ಧಾರವಾಡ –
ಇದೊಂದು ಪೊಲೀಸಪ್ಪನಿಗೆ ಬಾಡಿಗೆ ಕೊಟ್ಟ ಮಾಜಿ ಸೈನಿಕರೊಬ್ಬರ ಪರದಾಟದ ಕಥೆ.ಗಿರಿಯಪ್ಪ ದೇವರೆಡ್ಡಿ ಎಂಬುವರು ಧಾರವಾಡದ ನವಲಗುಂದ ಪಟ್ಟಣದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದರು ಬಾಡಿಗೆಗಾಗಿ ಡಿಆರ್ ಪೇದೆ ಯಶವಂತ ಎಂಬುವರಿಗೆ ಬಾಡಿಗೆ ನೀಡಿದ್ದಾರೆ.ಹೆಂಡತಿ ಮಕ್ಕಳೊಂದಿಗೆ ಕೆಲ ದಿನಗಳ ಕಾಲ ಮನೆಯಲ್ಲಿದ್ದ ಪೇದೆ ಯಶವಂತ ಆಮೇಲೆ ಮನೆಯತ್ತ ತಿರುಗಿ ನೋಡಿಲ್ಲ .
ಜಿಲ್ಲೆ ನವಲಗುಂದ ಪಟ್ಟಣದ ಮಾಜಿ ಸೈನಿಕರ ಕಾಲೋನಿಯಲ್ಲಿನ ಮನೆಯಲ್ಲಿ ಪೇದೆ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ನಂತರ ಅತ್ತ ಸುಳಿದಿಲ್ಲ. ಮೊದಲು ಹೆದ್ದಾರಿ ಪೆಟ್ರೋಲಿಂಗ್ ವಾಹನವನ್ನು ಚಾಲನೆ ಮಾಡುತ್ತಿದ್ದು ಸರಿಯಾಗಿ ಕರ್ತವ್ಯ ಮಾಡದ ಹಿನ್ನೆಲೆಯಲ್ಲಿ ಅಲ್ಲಿಂದ ಬೇರೆ ಕಡೆಗೆ ವರ್ಗಾವಣೆ ಮಾಡಲಾಯಿತು. ಅದೇ ಒಂದು ನೆಪ ಅಷ್ಟೇ ನವಲಗುಂದ ದಲ್ಲಿ ಇದ್ದ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದ್ದಾರೆ.
ಒಂದು ತಿಂಗಳು ಎರಡು ತಿಂಗಳು ಮೂರು ನಾಲ್ಕು ಐದಾರು ತಿಂಗಳು ಕಳೆದರು ಪೊಲೀಸಪ್ಪ ಮನೆಯತ್ತ ಬರಲಿಲ್ಲ ಬಾಡಿಗೆ ಕೊಡಲಿಲ್ಲ. ಇದರಿಂದಾಗಿ ಮಹಿಳೆ ಮಕ್ಕಳ ಪರದಾಟ ನೋಡಿದ ಕೆಲವರು ಸಹಾಯ ಮಾಡಿದ್ದಾರೆ. ಅಲ್ಲದೇ ಎಂಟು ತಿಂಗಳಾದ ನಂತರ ಪೊಲೀಸ್ ಪೇದೆ ಯಶವಂತ ಅವರ ಪತ್ನಿ ಮತ್ತು ಮಕ್ಕಳನ್ನು ಅವರ ತವರು ಮನೆಗೆ ಕಳಿಸಿಕೊಟ್ಟಿದ್ದಾರೆ.ಇದು ಒಂದು ಕಥೆಯಾದರೆ ಇನ್ನೂ ಬಾಡಿಗೆ ಕೊಟ್ಟ ಮನೆ ಬಾಡಿಗೆ ಇಲ್ಲ ಮನೆಯೂ ಇಲ್ಲ ಎಂದುಕೊಂಡು ಕೇಳಿ ಕೇಳಿ ಬೇಸತ್ತು ಈಗ ಮನೆಯ ಮಾಲೀಕರು ಮಾಜಿ ಸೈನಿಕ ಗಿರಿಯಪ್ಪ ದೇವರಡ್ಡಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಇದು ವಿಷಯ..ಸೋಜಿಗವೆಂದರೇ, ಕಳೆದ 8ತಿಂಗಳಿಂದ ಬಾಡಿಗೆಯನ್ನೂ ಕೊಡದೇ ಮನೆಯಲ್ಲಿರುವ ವಸ್ತುಗಳನ್ನ ತೆಗೆದುಕೊಂಡು ಹೋಗದೇ ಮಾಜಿ ಸೈನಿಕನಿಗೆ ತೊಂದರೆಯಾಗುತ್ತಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರನ್ನ ನೀಡಿದ್ದಾರೆ.
ಆದರೆ, ಇಲ್ಲಿಯವರೆಗೆ SP ಅವರು ಯಾವುದೇ ಸಹಾಯವನ್ನ ಮಾಡಿಲ್ಲ. ಡಿಆರ್ ಪೇದೆ ಯಶವಂತ ಮಾತ್ರ, ಆವಾಗ ಈವಾಗ ಬರತೇನಿ ಎನ್ನುತ್ತಲೇ ಇದ್ದಾರೆ. ಈ ಕುರಿತು ಅವರ ಸ್ನೇಹಿತರು ಕೂಡಾ ಮನೆ ಖಾಲಿ ಮಾಡಿ ಕೊಡುವಂತೆ ಹೇಳಿದ್ದಾರೆ ಆದರೂ ಯಶವಂತ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮತ್ತೊಬ್ಬರೊಂದಿಗೆ ಹೆಂಡತಿ ಮಕ್ಕಳನ್ನು ಮರೆತು ಆರಾಮವಾಗಿದ್ದಾರೆ. ಇನ್ನಾದರೂ ಮಾಜಿ ಸೈನಿಕರ ಮನವಿಗೆ ಎಸ್ಪಿ ಸಾಹೇಬರು ಸ್ಪಂದಿಸಿ ಇಲಾಖೆಯ ಗೌರವ ಕಾಪಾಡಿ ನೊಂದ ಕುಟುಂಬಕ್ಕೆ ನೆರವಾಗುತ್ತಾರೆನಾ ಕಾದು ನೋಡಬೇಕು.