ಧಾರವಾಡ –
ಪೊಟೊ ಶೂಟ್ ಮಾಡಲು ಹೋಗಿ ನವಲಗುಂದದ ಕಿರೇಸೂರ ಕಾಲುವೆಯಲ್ಲಿ ನಾಪತ್ತೆಯಾಗಿರುವ ಮೂವರ ಯುವಕರು ಇನ್ನೂ ಪತ್ತೆಯಾಗಿಲ್ಲ. ಒಂಬತ್ತು ಘಂಟೆಗಳ ನಿರಂತರ ಕಾರ್ಯಾಚರಣೆ ನಂತರವೂ ಕಾಲುವೆಯಲ್ಲಿ ಹೋಗಿರುವ ಮೂವರು ಯುವಕರನ್ನು ಹುಡುಕಾಡಿ ಹುಡುಕಾಡಿ ಹುಡುಕಾಡಿ ಕಾರ್ಯಾಚರಣೆ ನಿಲ್ಲಿಸಲಾಯಿತು.

ಕಾಲುವೆಗೆ ಇಂದೇ 200 ಕ್ಯೂ ಸೆಕ್ಸ್ ನೀರನ್ನು ಬಿಡಲಾಗಿದೆ.ಹೀಗಾಗಿ ಸಧ್ಯ ಕಾಲುವೆ ತುಂಬಿ ಹರಿಯುತ್ತಿದೆ. ಇನ್ನೂ ಕಾಲುವೆಯ ಮೇಲೆ ಪೊಟೊ ಶೂಟ್ ಮಾಡುವಾಗ ಏಕಾಏಕಿಯಾಗಿ ಜೇನುನೊಣಗಳು ದಾಳಿ ಮಾಡಿವೆ ಇದರಿಂದ ಭಯಗೊಂಡ ಐವರು ಪಾರಾಗಲು ನೀರಿನಲ್ಲಿ ಜಿಗಿದಿದ್ದಾರೆ.

ಕೊನೆಗೆ ನೀರಿನಲ್ಲಿ ಬಿದ್ದ ಐವರನ್ನು ನೋಡಿದ ಕುರಿಗಾಹಿ ಒರ್ವ ಯುವತಿ ಹಾಗೂ ಒರ್ವ ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಇನ್ನೂ ನೀರಿನಲ್ಲಿ ಹೋಗಿರುವ ಇನ್ನೂ ಮೂವರು ಪತ್ತೆಯಾಗಿಲ್ಲ. ಹೀಗಾಗಿ ಸಂಜೆಯಿಂದಲೂ ನಿರಂತರವಾಗಿ ಕಾರ್ಯಾಚರಣೆಯನ್ನು ಮಾಡಲಾಗುತ್ತಿತ್ತು.ಯಾವುದೇ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಸಧ್ಯ ಕಾರ್ಯಾಚರಣೆ ನಿಲ್ಲಿಸಲಾಗಿದೆ.

ಸಧ್ಯ ಮೂರು ಹಂತದಲ್ಲಿ ಶೋಧವನ್ನು ಮಾಡಿ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಮತ್ತು ರಾತ್ರಿತಾದ ಕಾರಣಕ್ಕಾಗಿ ನಿಲ್ಲಿಸಲಾಯಿತು.

ಅಗ್ನಿಶಾಮಕ ದಳದ ಟೀಮ್ ಮತ್ತೆ ಬೆಳಿಗ್ಗೆ ಆಪರೇಶನ್ ಬೆಳಿಗ್ಗೆ ಆರಂಭ ಮಾಡಲಿದೆ. ನಿರಂತರವಾಗಿ ಒಂಬತ್ತು ಘಂಟೆಗಳ ಕಾಲ ಹುಡುಕಾಡಿದರು ಮೂವರ ಯುವಕರ ಸುಳಿವು ಸಿಗಲಿಲ್ಲ ಹೀಗಾಗಿ ಸಧ್ಯ ಕಾರ್ಯಾಚರಣೆ ನಿಲ್ಲಿಸಿ ಬೆಳಿಗ್ಗೆ ಆರಂಭಿಸೊದಾಗಿ ಹುಬ್ಬಳ್ಳಿಯ ಗ್ರಾಮೀಣ ಇನ್ಸ್ಪೆಕ್ಟರ್ ರಮೇಶ್ ಗೋಕಾಕ ಹೇಳಿದರು. ನಾಪತ್ತೆಯಾಗಿದ್ದವರು ಹುಬ್ಬಳ್ಳಿಯ ರಾಮನಗರ ನಿವಾಸಿಗಳಾಗಿದ್ದು ಮಾಜಿ ಮಹಾನಗರ ಪಾಲಿಕೆಯ ಸದಸ್ಯೆ ಸುವರ್ಣಾ ಕಲ್ಲಗುಂಟ್ಲಾ ಮತ್ತು ಭಂಡಾರಿ ಕುಟುಂಬದವರಾಗಿದ್ದಾರೆ.