ಧಾರವಾಡ –
ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ತರ ಬೆಳವಣಿಗೆಯಾಗಿದೆ. ಅತ್ತ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾವಾಗುತ್ತಿದ್ದಂತೆ ಇತ್ತ ಸಿಬಿಐ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನಗರಕ್ಕೆ ಮತ್ತೆ ಸಿಬಿಐ ನ ಅಧಿಕಾರಿಗಳು ಆಗಮಿಸಿದ್ದು ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ಸರ್ಕಾರಿ ಅಭಿಯೋಜಕರ ವರ್ಗಾವಣೆ ಜಾಡು ಹಿಡಿದು ತನಿಖೆಯನ್ನು ಸಿಬಿಐ ಅಧಿಕಾರಿಗಳು ಆರಂಭ ಮಾಡಿದ್ದಾರೆ. ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿಗೆ ಸಿಬಿಐ ಬುಲಾವ್ ನೀಡಿದೆ. ಬುಲಾವ್ ಬರುತ್ತಿದ್ದಂತೆ ಸಿಬಿಐ ವಿಚಾರಣೆಗೆ ಸುಮಿತ್ರಾ ಅಂಚಟಗೇರಿ ಆಗಮಿಸಿದರು
ಧಾರವಾಡ ಉಪನಗರ ಠಾಣೆಗೆ ಆಗಮಿಸಿದ್ದು ಯೋಗೀಶಗೌಡ ಕೇಸ್‌ನಲ್ಲಿ ಸಹಕಾರ ನೀಡಿದ ಆರೋಪ ಅಂಚಗೇರಿ ಮೇಲೆ ಇದೆ. ಹೀಗಾಗಿ ಈ ಒಂದು ಆರೋಪವನ್ನು ಯೊಗೀಶಗೌಡ ಸಹೋದರ ಗುರುನಾಥಗೌಡ ಈ ಸಂಬಂಧ ಗೃಹ ಇಲಾಖೆಗೆ ಪತ್ರವನ್ನು ಬರೆದಿದ್ದರು.
ಮೊದಲಿದ್ದ ಅಭಿಯೋಜಕರ ಸ್ಥಾನಕ್ಕೆ ವರ್ಗವಾಗಿ ಬಂದಿದ್ದ ಅಂಚಟಗೇರಿ ಖುದ್ದು ವಿನಯ ಕುಲಕರ್ಣಿಗೆ ವರ್ಗಾವಣೆ ಮಾಡಿಸಿದ್ದ ಆರೋಪ ಕೇಳಿ ಬಂದಿತ್ತು ಈ ಒಂದು ಜಾಡನ್ನು ಹಿಡಿದು ಸಿಬಿಐ ಅಧಿಕಾರಿಗಳು ಮತ್ತೊಂದು ದಾರಿಯಲ್ಲಿ ತನಿಖೆ ಆರಂಭಿಸಿದ್ದಾರೆ.
ಇನ್ನೂ ಇದರೊಂದಿಗೆ ವಿನಯ ಕುಲಕರ್ಣಿ ಆಪ್ತ ಪ್ರಶಾಂತ ಕೇಕರೆ ಅವರನ್ನು ಕೂಡಾ ವಿಚಾರಣೆಗೆ ಸಿಬಿಐ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಹೀಗಾಗಿ ಪ್ರಶಾಂತ್ ಕೇಕರೆ ವಿಚಾರಣೆಗೆ ಹಾಜರಾಗಿದ್ದಾರೆ. ಇದರೊಂದಿಗೆ ಸಿಬಿಐ ಅಧಿಕಾರಿಗಳ ತನಿಖೆ ಮತ್ತಷ್ಟು ತೀವ್ರಗೊಂಡಿದೆ.