ವಿಷ ಕುಡಿದ ಪ್ರೇಮಿಗಳು – ಬಾಲಕಿ ಸಾವು ಆಸ್ಪತ್ರೆಯಲ್ಲಿ ಶಿವಕುಮಾರ್

Suddi Sante Desk

ಯಾದಗಿರಿ –

ಮದುವೆ ಆಗೋದಾಗಿ ನಂಬಿಸಿ ಅಪ್ರಾಪ್ತ ಆ ಬಾಲಕಿ ಯನ್ನು ಕರೆದುಕೊಂಡು ಹೋಗಿ ಲೈಂಗಿಕ ಸಂಪರ್ಕ ಮಾಡಿ ನಂತರ ವಿಷ ಕುಡಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಯಾದಗಿರಿ ಯಲ್ಲಿ ನಡೆದಿದೆ.ಹೌದು ಪ್ರೀತಿ-ಪ್ರೇಮ ಅಂತ ಅಪ್ರಾಪ್ತೆಯನ್ನ ಬಲೆಗೆ ಬೀಳಿಸಿ ಕೊಂಡ ಯುವಕನೊಬ್ಬ ಆಕೆಯನ್ನ ಮದುವೆ ಆಗು ವುದಾಗಿ ಕಾರಿನಲ್ಲಿ ಹೊತ್ತೊಯ್ದು ಇದೀಗ ಆಸ್ಪತ್ರೆ ಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿ ದ್ದಾನೆ.ಅತ್ತ ಬಾಲಕಿ ಸತ್ತು ಮಲಗಿದ್ದಾಳೆ.

ಸಿಂದಗಿಯ ತಾಲೂಕಿನಲ್ಲಿ ಈ ಒಂದು ಘಟನೆ ಸಂಭ ವಿಸಿದೆ.ಶಿವಕುಮಾರ್ ಬಾಚಮಟ್ಟಿ ಎಂಬಾತ ಹುಣ ಸಗಿ ಪಟ್ಟಣದ ಅಪ್ತಾಪ್ತ ಬಾಲಕಿಯನ್ನ ಪ್ರೀತಿಸುತ್ತಿ ದ್ದ. ಮದುವೆ ಆಗುವುದಾಗಿ ನಂಬಿಸಿ ಆಕೆಯನ್ನ ಮೇ 6ರಂದು ಕಾರಿನಲ್ಲಿ ಕರೆದೊಯ್ದಿದ್ದ. ಇದಕ್ಕೆ ಆತನ ಇಬ್ಬರು ಸ್ನೇಹಿತರು ಕೂಡಾ ಸಾಥ್ ನೀಡಿದ್ದರಂತೆ ಸಿಂದಗಿ ತಾಲೂಕಿನ ಯಂಕಂಚಿಯ ಲಾಡ್ಜ್ ನಲ್ಲಿ ಇಬ್ಬರೂ ತಂಗಿದ್ದರು. ಅದ್ಹೇನಾಯ್ತೋ ಏನೋ ಮೇ 7ರ ರಾತ್ರಿ ಇಬ್ಬರೂ ವಿಷ ಕುಡಿದಿದ್ದಾರೆ

ಇನ್ನೂ ಅತ್ತ ಮಗಳನ್ನು ಹಿಂಬಾಲಿಸಿಕೊಂಡು ಬಂದ ಪೋಷಕರಿಗೆ ಮಗಳು ಯುವಕನೊಂದಿಗೆ ಲಾಡ್ಜ್ ನಲ್ಲಿ ಇರುವ ವಿಷಯ ಗೊತ್ತಾಗಿತ್ತು.ಅಲ್ಲಿಗೆ ಬಂದು ಬಾಗಿಲು ಬಡಿಯುವಷ್ಟರಲ್ಲಿ ಬಾಲಕಿ ಮತ್ತು ಪ್ರಿಯಕ ರ ಇಬ್ಬರೂ ಬಿದ್ದು ಒದ್ದಾಡುತ್ತಿದ್ದರು.ಕೂಡಲೇ ಅವ ರಿಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರು.ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಯುವ ಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇತ್ತ ಮೃತ ಬಾಲಕಿಯ ಪೋಷಕರು ಯುವಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ವಿಷ ಕುಡಿದವರನ್ನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಬಾಲ ಕಿ ಅಂದು ಏನೆಲ್ಲ ಆಯ್ತು ಎಂಬುದನ್ನು ಪಾಲಕರ ಬಳಿ ಬಾಯ್ಬಿಟ್ಟಿದ್ದಾಳಂತೆ‌.ಮದುವೆ ಆಗುವುದಾಗಿ ನನ್ನನ್ನು ನಂಬಿಸಿದ ಶಿವಕುಮಾರ್ ಕಾರಿನಲ್ಲಿ ಲಾಡ್ಜ್ ಗೆ ಕರೆದೊಯ್ದ.ನಾನು ಬೇಡ ಬೇಡ ಅಂದರೂ ಲೈಂಗಿಕ ಸಂಭೋಗ ನಡೆಸಿದ.ಇದಾದ ಮೇಲೆ ಬಸ ನಗೌಡ ಎಂಬಾತ ಬಂದು ನಿಮ್ಮನ್ನು ಮನೆಯವರೆಲ್ಲ ಹುಡುಕುತ್ತಿದ್ದಾರೆ.ಅವರ ಕೈಗೆ ಸಿಕ್ಕರೆ ಒಟ್ಟಿಗೆ ಇರಲು ಬಿಡಲ್ಲ.ಎಲ್ಲಾದರೂ ವಿಷ ಕುಡಿದು ಸಾಯಿರಿ.ಆದರೆ ಊರಿಗೆ ಮಾತ್ರ ಬರಬೇಡಿ ಅಂದ. ಅದಕ್ಕೆ ನಾವು ವಿಷ ಕುಡಿದೆವು.ಎಂದು ಸಾವಿಗೂ ಮುನ್ನ ಬಾಲಕಿ ಹೇಳಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಿವಕುಮಾರ್ ಬಾಚಿಮಟ್ಟಿ, ಪ್ರಿಯಕರನಿಗೆ ಸಾಥ್ ನೀಡಿದ್ದ ಈತನ ಸ್ನೇಹಿತರಾದ ಮಹಾಂತೇಶ್ ಹಾಗೂ ಬಸನಗೌಡನ ವಿರುದ್ಧ ಎಫ್ಐಆರ್ ದಾಖಲಾಗಿದೆ ಸಧ್ಯ ದೂರನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.