ಬೆಳ್ಳಂ ಬೆಳಿಗ್ಗೆ ಮದುವೆ – ಸಂಜೆ ಯಾಗುತ್ತಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಮದುವೆ ವಿಚಾರ

Suddi Sante Desk

ಬೆಂಗಳೂರು –

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಬೆಳಿಗ್ಗೆ ಮದುವೆಯಾಗಿ ಸಂಜೆ ಪೊಲೀಸ್ ಠಾಣೆ ಮೆಟ್ಟಿಲೇರಿ ದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು ಈಗ ದೊಡ್ಡ ವಿವಾದಕ್ಕೀಡಾಗಿದ್ದಾರೆ.

ಹೌದು ಬೆಳಿಗ್ಗೆ ಬೆಂಗಳೂರಿನಲ್ಲಿ ದೇವಸ್ಥಾನದಲ್ಲಿ ಮಂಡ್ಯದ ನಾಗಾರ್ಜುನ ಜೊತೆ ಸರಳವಾಗಿ ವಿವಾದ ಆಗಿದ್ದರು. ಆದರೆ ಇದು ಬಲವಂತ ಹಾಗೂ ಬೆದರಿಕೆ ಯ ಮದುವೆ ಎಂದು ಕೋಲಾರ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ‌.ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿದ್ದ ಚೈತ್ರಾ ಕೊಟ್ಟೂರು, ಮಂಡ್ಯ ಮೂಲದ ನಾಗಾರ್ಜುನ್ ಜೊತೆಗೆ ನಿನ್ನೆ ಬೆಂಗಳೂರಿನ ಬ್ಯಾಟರಾಯನಪುರ ಗಣಪತಿ ದೇಗುಲದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ನಾಗಾರ್ಜುನ್ ಗೆ ಚೈತ್ರಾ ಜೊತೆ ಮದುವೆಯಾಗು ವುದು ಇಷ್ಟವಿರಲಿಲ್ಲ. ಆದರೆ ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್ ಅವರನ್ನ ಕೂಡಿ ಹಾಕಿ ದೇಗುಲದಲ್ಲಿ ಚೈತ್ರಾ ಕೊಟ್ಟೂರು ಮದುವೆ ಆಗಿದ್ದಾರೆ ಎನ್ನಲಾಗಿದೆ. ಸಂಘಟನೆಗಳ ಬೆದರಿಕೆಗೆ ಬಗ್ಗಿದ ನಾಗಾರ್ಜುನ್ ಬಲವಂತವಾಗಿ ಚೈತ್ರಾಗೆ ತಾಳಿ ಕಟ್ಟಿದ್ದಾರೆ ಎನ್ನಲಾಗಿದ್ದು ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದು ನಾಗಾರ್ಜುನ್ ಕುಟುಂಬದ ವರು ತಗಾದೆ ತೆಗೆದಿದ್ದಾರೆ.ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಗಾರ್ಜುನ್ ಕುಟುಂಬದ ವರು ದೂರು ನೀಡಿದ್ದಾರೆ.

ಪೊಲೀಸ್ ಠಾಣೆಗೆ ಆಗಮಿಸಿರುವ ಚೈತ್ರಾ ಕೊಟ್ಟೂರು ನಾಗಾರ್ಜುನ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ಚೈತ್ರಾ ಜೊತೆ ಮದುವೆ ಇಷ್ಟವಿಲ್ಲ ಅಂತಾ ನಾಗಾರ್ಜುನ್ ಹೇಳಿದ್ದರೆ, ನನಗೆ ನಾಗಾರ್ಜು ನ್ ಇಷ್ಟ, ಅವನ ಜೊತೆ ಹೋಗುವೆ ಅಂತ ಚೈತ್ರಾ ಕೊಟ್ಟೂರು ಪಟ್ಟು ಹಿಡಿದಿದ್ದಾರೆ.ವಿಚಾರಣೆ ನಡೆಸಿದ ಪೊಲೀಸರು ಪರಸ್ಪರ ಮಾತುಕತೆ ನಡೆಸಿ ನಿರ್ಧಾರಕ್ಕೆ ಬರುವಂತೆ ಸಲಹೆ ನೀಡಿ ಕಳುಹಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.