ಬೆಂಗಳೂರು –
ಬೆಂಗಳೂರಿನ ಜಯನಗರ ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಸೌಮ್ಯಾರೆಡ್ಡಿ ವಿರುದ್ಧ ಎಫ್‍ಐಆರ್ ಹಾಕಲಾಗಿದೆ.

ಇತ್ತೀಚಿಗೆ ನಗರದ ಫ್ರಿಡಂ ಪಾರ್ಕ್ ಮೈದಾನದಲ್ಲಿ ಕೃಷಿ ವಿಧೇಯಕಗಳ ವಿರೋಧಿಸಿ ಕಾಂಗ್ರೆಸ್ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಶಾಸಕಿ ಸೌಮ್ಯಾರೆಡ್ಡಿ ಭಾಗವಹಿಸಿದ್ದರು.

ಬಂಧನ ಮಾಡುವ ಸಮಯದಲ್ಲಿ ಅವರನ್ನು ಮಹಿಳಾ ಪೊಲೀಸ್ ಪೇದೆ ವಶಕ್ಕೆ ಪಡೆಯಲು ಮುಂದಾಗಿದ್ದರು. ಈ ವೇಳೆ ಹಲ್ಲೆ ಮಾಡಿದ್ದರು ಎಂದು ಶಾಸಕಿಯವರು ಆರೋಪ ಮಾಡಿದ್ದಾರೆ.

ಈ ಸಂಬಂಧ ಸೌಮ್ಯಾರೆಡ್ಡಿ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಭಾರತೀಯ ನೀತಿಸಂಹಿತೆ ಕಲಂ 353 ಅಡಿ ಎಫ್‍ಐಆರ್ ದಾಖಲಾಗಿದೆ.

ಇನ್ನೂ ಮಹಿಳಾ ಪೊಲೀಸ್ ಪೇದೆಯ ಹಲ್ಲೆಯ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಇವರು ಪಡೆದುಕೊಂಡಿದ್ದರು.ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಇವೆಲ್ಲದರ ನಡುವೆ ಈಗ ಶಾಸಕಿಯವರ ಮೇಲೆ ದಾಖಲಾಗಿದ್ದು ಮುಂದೇನು ಮಾಡತಾರೆ ಎಂಬುದನ್ನು ಕಾದು ನೋಡಬೇಕು.