ಅಣ್ಣ ನ ಮನೆಗೆ ಕನ್ನ ಹಾಕಿದ ತಮ್ಮ – ಒಡಹುಟ್ಟಿದವನ ಮನೆನೂ ಬಿಡಲಿಲ್ಲ ತಮ್ಮ – ಮುಂದೆ ಆಗಿದ್ದೆ ಬೇರೆ…..

Suddi Sante Desk

ನಂಜನಗೂಡು –

ಅಣ್ಣನ ಮನೆಯಲ್ಲಿ ತಮ್ಮನೊಬ್ಬ ಕಳ್ಳತನ ಮಾಡಿದ ಘಟನೆ ಹಾಸನ ಜಿಲ್ಲೆಯ ನಂಜನಗೂಡು ನಲ್ಲಿ ನಡೆದಿದೆ. ಅಣ್ಣನ ಮನೆಯಲ್ಲಿ ಉಳಿದುಕೊಂಡ ತಮ್ಮ ಕಳ್ಳತನ ಮಾಡಿ ತಮ್ಮ ಸಿಕ್ಕಿಬಿದ್ದಿರುವ ಘಟನೆ ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ.

ಯುಗಾದಿ ಹಬ್ಬಕ್ಕಾಗಿ ಅಣ್ಣನ ಮನೆಗೆ ಸ್ವಾಮಿ ಮತ್ತು ಆತನ ಹೆಂಡತಿ ಸುನಂದಾ ಬಂದಿದ್ದಾರೆ. ಒಂದು ತಿಂಗಳು ತಂಗುವುದಾಗಿ ಹೇಳಿ ಬಂದಿದ್ದ ಸಹೋದ ರ,ಅಣ್ಣ ಬೀರುವಿನಲ್ಲಿ ಇಟ್ಟಿದ್ದ 3.30 ಲಕ್ಷ ರೂಪಾ ಯಿ ಹಣವನ್ನು ಲಪಟಾಯಿಸಿದ್ದಾನೆ. ಬಂದ ಮಾರ ನೇ ದಿನವೇ ತಾನಿದ್ದ ಊರಿಗೆ ತಮ್ಮ ವಾಪಸ್‌ ಆಗಿದ್ದಾನೆ. ಈ ವೇಳೆ ಅಣ್ಣ ಬೀರುವನ್ನು ನೋಡಿದಾ ಗ ಹಣ ಕಳವಾಗಿರುವುದು ಗೊತ್ತಾಗಿದೆ. ತಮ್ಮನಿಗೆ ಫೋನ್‌ ಕರೆ ಮಾಡಿ ಕೇಳಿದರೆ ಉಡಾಫೆಯಿಂದ ಉತ್ತರಿಸಿದ್ದಾರೆ.

ಕೂಡಲೇ ಇದರಿಂದ ಅನುಮಾನಗೊಂಡ ಅಣ್ಣ ವೆಂಕಟರಾಜು ಪೊಲೀಸ್‌ ಠಾಣೆಗೆ ದೂರು ನೀಡಿ ದ್ದಾನೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಹಣ ಎಗರಿಸಿದ್ದ ವೆಂಕಟರಾಜುವಿನ ತಮ್ಮ ಮತ್ತು ಆತನ ಹೆಂಡತಿಯನ್ನು ವಶಕ್ಕೆ ಪಡೆದಿದ್ದಾರೆ.ಸಧ್ಯ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡತಾ ಇದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.