ರಾಜ್ಯದಲ್ಲಿ ಕೋವಿಡ್ ಗೆ ನಾಲ್ವರು ಶಿಕ್ಷಕರು ನಿಧನ – ಮೃತ ಶಿಕ್ಷಕರಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಭಾವಪೂರ್ಣ ನಮನ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ನಾಲ್ಕು ಜನ ಶಿಕ್ಷಕರು ಮೃತರಾಗಿದ್ದಾರೆ. ಮಹಾಮಾರಿ ಕೋವಿಡ್ ಗೆ ಇಬ್ಬರು ಶಿಕ್ಷಕಿಯರು ಹಾಗೇ ಇಬ್ಬರು ಶಿಕ್ಷಕರು ನಿಧನರಾಗಿದ್ದಾರೆ. ಚಿಕ್ಕಬಳ್ಳಾಪೂರ ಜಿಲ್ಲೆಯ ಚಿಂತಾ ಮಣಿಯ ಸರ್ಕಾರಿ ಶಾಲೆಯ ಶಿಕ್ಷಕಿ ಶ್ರೀಮತಿ ಎಂ ಪಿ ರಾಧಾ ಇವರು ನಿಧನರಾಗಿದ್ದಾರೆ.ಕೋವಿಡ್ ನಿಂದಾ ಗಿ ಇವರು ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದರು.ಚಿಕಿತ್ಸೆ ಫಲಿಸದೇ ಇವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.

ಶ್ರೀಮತಿ ಲತಾ ಪೂಜಾರ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಲಕಮಾಪೂರ ಇವರು ನಿಧನರಾಗಿದ್ದಾ ರೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಇವರು ಮೃತರಾಗಿದ್ದು ನಿಧನಕ್ಕೆ ಶಾಲೆಯ ಶಿಕ್ಷಕರು ಆಪ್ತರು ತಾಲ್ಲೂಕಿನ ಶಿಕ್ಷಕರು ಅಗಲಿದ ಶಿಕ್ಷಕಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.

ಸಿದ್ದಪ್ಪ ಇಂಗಳೇಶ್ವರ ವಿಜಯಪುರ ಜಿಲ್ಲೆಯ ಬಿಎಲ್ ಡಿ ಸಂಸ್ಥೆಯ ಶಿಕ್ಷಕ ರಾಗಿದ್ದ ಇವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ

ಪಿ ಡಿ ತೋಟದ ಇಂಗ್ಲಿಷ್ ಶಿಕ್ಷಕರು ಶಾಂತೇಶ್ವರ ಪದವಿ ಪೂರ್ವ ಕಾಲೇಜು ವಿಜಯಪುರ ಇವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ.

ರಾಜ್ಯದಲ್ಲಿ ಮೃತರಾದ ಶಿಕ್ಷಕರಿಗೆ ಶಿಕ್ಷಕ ಬಂಧುಗಳಾ ದ ನಾಗರಾಜ ಕಾಮನಹಳ್ಳಿ,ಗುರು ತಿಗಡಿ ,ಅಶೋಕ ಸಜ್ಜನ,ಮಲ್ಲಿಕಾರ್ಜುನ ಉಪ್ಪಿನ, ಕಿರಣ ರಘುಪತಿ, ಪವಾಡೆಪ್ಪ, ಎಂ ಐ ಮುನವಳ್ಳಿ, ಶರಣಬಸವ ಬನ್ನಿಗೋಳ, ಎಸ್ ಎಫ್ ಪಾಟೀಲ, ಎಲ್ ಐ ಲಕ್ಕಮ್ಮನವರ ಪಿ ಎಸ್ ಅಂಕಲಿ ಶರಣು ಪೂಜಾರ,

ಸಂಗಮೇಶ ಖನ್ನಿನಾಯ್ಕರ,ಚಂದ್ರಶೇಖರ್ ಶೆಟ್ರು, ಹನುಮಂತಪ್ಪ ಬೂದಿಹಾಳ, ಎನ್ ಎಂ ಕುಕನೂರ, ಆರ್ ಎಂ ಕಮ್ಮಾರ, ಜಿ ಟಿ‌ ಲಕ್ಷ್ಮೀದೇವಮ್ಮ ಕೆ ಬಿ ಕುರಹಟ್ಟಿ, ಎಂ ವಿ ಕುಸುಮಾ ಜೆ ಟಿ ಮಂಜುಳಾ, ರಾಜಶ್ರೀ ಪ್ರಭಾಕರ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಬಾಬಾಜಾನ ಮುಲ್ಲಾ, ರಂಜನಾ ಪಂಚಾಳ ಸುವರ್ಣ ನಾಯ್ಕ ಕೆ ನಾಗರಾಜ, ಬಿ ಎಸ್ ಮಂಜುನಾಥ, ಅಕ್ಕಮಹಾದೇವಿ ನೂಲ್ವಿ. ಶಿವು ಕಣ್ಣೂರ ಸೇರಿದಂತೆ ಹಲವು ಶಿಕ್ಷಕರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.