ಹುಬ್ಬಳ್ಳಿ –
ಕೋವಿಡ 19 ಸಂದರ್ಭದಲ್ಲಿ ಸಂಪೂರ್ಣ ದೇಶ ಲಾಕ್ ಡೌನ್ ಆದ ಕಾರಣ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿತ್ತು. ಲಾಕ್ ಡೌನ್ ಸಮಯ ದಲ್ಲಿ ತೊಂದರೆಗೀಡಾದ ಬಹಳಷ್ಟು ಪಾಲಕರಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕೂಲ ಫೀ ಕಟ್ಟುವುದು ಸಹ ಕಷ್ಟಕರವಾಗಿತ್ತು. ಇಂಥಹ ಸಂಕಷ್ಟದ ಪರಿಸ್ಥಿತಿಯಲ್ಲಿ ಫೀ ತುಂಬಲಾಗದೆ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಯೊಬ್ಬರಿಗೆ ಹುಬ್ಬಳ್ಳಿಯಲ್ಲಿ ಪ್ರಕಾಶ್ ಬುರಬುರೆ ನೆರವಾಗಿದ್ದಾರೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವೈಯಕ್ತಿ ಕವಾಗಿ 5400 ₹ ಚೆಕ್ ನ್ನು ನೀಡುವುದರ ಮೂಲಕ ಅಳಿಲು ಸೇವೆಯನ್ನು ಮಾಡಿದರು. ಹಾಗೂ ಸದರ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿಯ ಶ್ರೀ ದುರ್ಗಾದೇವಿ ಕನ್ನಡ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಗೆ ಪ್ರವೇಶಾತಿಯನ್ನು ಕಲ್ಪಿಸಲಾಯಿತು.

ಈ ಒಂದು ಸಂದರ್ಭದಲ್ಲಿ ರಮೇಶ ಮೊಗಜಿಕೊಂಡಿ,ಆನಂದ ಬದ್ದಿ,ಜಿತೂರಿ,ಶಾಲೆಯ ಮುಖ್ಯೋಪಾಧ್ಯಾಯ ರಾಮಚಂದ್ರ ಬದ್ದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.