ಧಾರವಾಡ –
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಲು ಸಾಲು ಪ್ರತಿಭಟನೆಗಳು ಕಂಡು ಬಂದವು. ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಲವು ಸಂಘಟನೆಗಳು ಜಿಲ್ಲಾಧಿಕಾರಿಗಳು ಪ್ರತಿಭಟನೆ ಮಾಡಿದರು.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ವನ್ನು ಬೆಂಬಲಿಸಿ ನಗರದಲ್ಲಿ ಕರ್ನಾಟಕ ರೈತ ಸೇನಾ ಘಟಕದವರು ಪ್ರತಿಭಟನೆ ಮಾಡಿದರು.

ಸಂಘಟನೆಯ ರಾಜ್ಯ ಅಧ್ಯಕ್ಷ ಶಂಕರ ಅಂಬಲಿ ನೇತ್ರತ್ವದಲ್ಲಿ ಪ್ರತಿಭಟನೆ ಮಾಡಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿದರು.

ಇನ್ನೂ ಮತ್ತೊಂದೆಡೆ ಮಹಾತ್ಮಗಾಂಧಿ ಹುತಾತ್ಮ ದಿನ ಹಿನ್ನಲೆಯಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಯಿತು. ಹಿರಿಯ ನ್ಯಾಯವಾದಿ ಪಿ ಎಚ್ ನೀರಲಕೇರಿ ನೇತ್ರತ್ವದಲ್ಲಿ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಮಾಡಲಾಯಿತು.ಇದೇ ವೇಳೆ ದೆಹಲಿಯಲ್ಲಿನ ರೈತರ ಮೇಲಿನ ಹಿಂಸೆಯನ್ನು ಖಂಡಿಸಲಾಯಿತು.

ಇವರೊಂದಿಗೆ ಶ್ರೀಶೈಲಗೌಡ ಕಮತರ,ಫೀರೋಜ್ ಖಾನ್ ಹವಲ್ದಾರ,ಶಿವಾನಂದ ಹಾದಿಮನಿ. ಎಮ್ ಕೆ ಕಾಗಿನೆಲೆ,ಅಬ್ದುಲ್ ಖಾನ್ ಸೇರಿದಂತೆ ಹಲವರು ಹೋರಾಟಕ್ಕೆ ಸಾಥ್ ನೀಡಿದರು.

ಇನ್ನೂ ಮತ್ತೊಂದೆಡೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮತ್ತೊಂದು ಹೋರಾಟವೂ ಕಂಡು ಬಂದಿತು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೇ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಆನಂದ ಜಾಧವ ನೇತ್ರತ್ವದಲ್ಲಿನ ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಇವರು ಕೂಡಾ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮುಖ್ಯವಾಗಿ ಹೇಮಂತ ಗುರ್ಲಹೊಸೂರ, ಮಂಜುನಾಥ ಭೋವಿ,ಶರಣಪ್ಪ ಕೊಟಗಿ,ನಾಗರಾಜ ಗುರಿಕಾರ,ಜಯಂತ ಸಾಗರ, ಆನಂದ ಮೂಶನ್ನವರ,ಬಸವರಾಜ ಮಲಕಾರಿ, ಆನಂದ ಸಿಂಗನಾಥ,ವಸಂತ ಅರ್ಕಚಾರಿ,ಸುಮಿತ್ರಾ ಕೋಟಕರ,ಕುಸುಮಾ ಜೈನ್,ರತ್ನಾ ಮೂಲಿಮನಿ, ಸೇರಿದಂತೆ ಹಲವರು ಈ ಒಂದು ಪ್ರತಿಭಟನೆಯಲ್ಲಿ ಹುಬ್ಬಳ್ಳಿ ಧಾರವಾಡ ನಗರ ಕಾಂಗ್ರೇಸ್ ಘಟಕದಲ ಹೋರಾಟದಲ್ಲಿ ಪಾಲ್ಗೊಂಡರು,