SSLC ಮತ್ತು ದ್ವಿತೀಯ PUC ಪರೀಕ್ಷೆಗಳು 2020-21 ನೇ ಸಾಲಿಗೆ ರದ್ದು ಮಾಡಲಿ ಅಥವಾ ಆನ್ಲೈನ್ ನಲ್ಲಿ ಪರೀಕ್ಷೆ ಮಾಡಲಿ, ಶಾಲಾ ಕಾಲೇಜ್ ಗಳಲ್ಲಿ ಮೌಲ್ಯಮಾಪನ ಗ್ರೇಡ್ ಆಧಾರದ ಮೇಲೆ ಮಕ್ಕಳನ್ನು ಉತ್ತೀರ್ಣ ಮಾಡಲಿ

Suddi Sante Desk

ಬೆಂಗಳೂರು –

ಕೊರೋನ -19 ದಿನೇ ದಿನೇ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು ಒಂದು ವರ್ಷ ಆರು ತಿಂಗಳಿಂದ ಕೊರೋನ ಸಮಾಜವನ್ನು ತಲ್ಲಣಗೊಳಿಸಿ ನಮ್ಮ ರಾಜ್ಯದಲ್ಲಿ 5,00,000 ಕ್ಕಿಂತ ಹೆಚ್ಚು ಕೊರೋನ ಪ್ರಕರಣಗಳು ಕಂಡು ಬಂದು ದೇಶದಲ್ಲಿಯೇ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ

30, 000 ಕ್ಕಿಂತ ಹೆಚ್ಚು ಜನರು ಈ ಕೊರೋನದಿಂದ ಮರಣ ಹೊಂದಿದ್ದಾರೆ 2 ನೇ ಅಲೆಯಲ್ಲಿ ಕರ್ನಾಟಕ ಗಣನೀಯವಾಗಿ ದಿನೇ ದಿನೇ ಏರಿಕೆಯಾಗುತ್ತಿವೆ. ಅದರಲ್ಲಿ ಬ್ಲಾಕ್ ಪಂಗಸ್, ವೈಟ್ ಪಂಗಸ್, ಹಳದಿ ಪಂಗಸ್ ಎಂದು ವಿವಿಧ ರೀತಿಯಲ್ಲಿ ಜನರನ್ನು ಕೊಲ್ಲುತ್ತಿದ್ದು ಭಯದಲ್ಲಿ ಪ್ರತಿಯೊಬ್ಬರನ್ನು ತಲ್ಲಣ ಗೊಳಿಸುತ್ತಿದೆ

ಇನ್ನೂ ಪ್ರಮುಖವಾಗಿ ಮಕ್ಕಳಿಗೆ 2020-21 ನೇ ಸಾಲಿನಲ್ಲಿ ಕೇವಲ ಒಂದು ತಿಂಗಳು ಮುಖಾ ಮುಖಿ ತರಗತಿಗಳು ನಿರ್ವಹಣೆ ಆಗಿರುವುದು ಬಿಟ್ಟರೆ, ಇನ್ನು ಉಳಿದೆಂಗೆಲ್ಲ ಆನ್ ಲೈನ್ ತರಗತಿಗಳೇ ಆಗಿವೆ ಬಹುತೇಕ ಎಲ್ಲಾ ಶೈಕ್ಷಣಿಕ ವರ್ಷ ಆನ್ ಲೈನ್ ಆನ್ ಲೈನ್ ನಲ್ಲಿಯೇ ನಡೆದಿದ್ದು ಹೀಗಾಗಿ ಆನ್ ಲೈನ್ ನಲ್ಲಿ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ

80% ಹಳ್ಳಿಗಾಡಿನ ಮಕ್ಕಳು ವಿವಿಧ ಕಾರಣಗಳಿಂದ ಆನ್ಲೈನ್ ತರಗತಿ ಉಪಯೋಗವನ್ನು ಸರಿಯಾಗಿ ಪಡೆಯಲು ಸಾಧ್ಯವಾಗಲಿಲ್ಲ.ಈಗಾಗಲೇ ರಾಜ್ಯದಲ್ಲಿ 10,000 ಕ್ಕಿಂತ ಹೆಚ್ಚು ಮಕ್ಕಳು ಕರೋನ ಪೀಡಿತ ರಾಗಿ ಅನೇಕ ಮಕ್ಕಳು ಅಸುನೀಗಿದ್ದಾರೆ. ಶಿಕ್ಷಣ ಇಲಾಖೆಯ ಆನೇಕ ಸರ್ಕಾರಿ ಅರೆಸರ್ಕಾರಿ ನೌಕರ ರು, ಶಿಕ್ಷಕರು ಈ ಸಾಂಕ್ರಾಮಿಕ ವೈರಸ್ ನಿಂದ ಇಂದು ನಮ್ಮ ರಾಜ್ಯದಲ್ಲಿ ಸಾವಿರಾರು ಮಂದಿ ಸತ್ತಿ ದ್ದಾರೆ

ಜುಲೈನಿಂದ 3 ನೇ ಅಲೆ ಬರುವುದು ಎಂದು ತಜ್ಞ ವೈದ್ಯರುಗಳು ಅಭಿಪ್ರಾಯ ತಿಳಿಸಿರುವುದರಿಂದ ಇದೇ ಜುಲೈ ಆಗಸ್ಟ್‌ ತಿಂಗಳ ಸಂದರ್ಭದಲ್ಲಿ SSLC PUC ಪರೀಕ್ಷೆಗಳು ನೆಡೆದರೆ ನಮ್ಮ ರಾಜ್ಯದಲ್ಲಿ ಕೊರೋನ ಅಬ್ಬರದಿಂದ ಅಲ್ಲೋಲ -ಕಲ್ಲೋಲವಾಗಿ ಹೆಚ್ಚು ಸಾವು ನೋವುಗಳು ಕಂಡುಬರುತ್ತವೆ. ಈಗ ಜೀವನಕ್ಕಿಂತ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ.ಈ ವೈರಾಣು ವಿರುದ್ಧಯಾವುದೇ ಚುಚ್ಚು ಮದ್ದು ಮಕ್ಕಳಿಗೆ ಇದುವರೆಗೂ ನೀಡಿಲ್ಲ. ಪರೀಕ್ಷೆಗಳು ಪ್ರಾರಂಭವಾದರೆ ಮಕ್ಕಳು ಸೇರಿದಂತೆ 25 ಲಕ್ಷ ಮಂದಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸು ವವುದರಿಂದ ಈ ಸಾಂಕ್ರಾಮಿಕ ರೋಗ ಹೆಚ್ಚು ಉಲ್ಬಣವಾಗುತ್ತದೆ

ಆದ್ದರಿಂದ ದೇಶದಲ್ಲಿ 8-10 ರಾಜ್ಯಗಳು ಈಗಾಗಲೇ SSLC PUC ಪರೀಕ್ಷೆಗಳನ್ನು ಮಾಡುವುದನ್ನು ರದ್ದು ಮಾಡಿದ್ದಾರೆ.ಆದರೆ ನಮ್ಮ ರಾಜ್ಯದಲ್ಲಿ ಇದರ ಬಗ್ಗೆ ಸರ್ಕಾರ ಶಿಕ್ಷಣ ತಜ್ಞರು,ಶಿಕ್ಷಕರು, ಚಿಂತಿಸಿ ಸಾಕಾರಾ ತ್ಮಕವಾಗಿ ಮಕ್ಕಳನ್ನು ಕಾಪಾಡುವ ಹಿತದೃಷ್ಟಿಯಿಂದ ಕರ್ನಾಟಕದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂ ಗ, ಶಿಕ್ಷಣ ಇಲಾಖೆ ಮತ್ತು ಸರ್ಕಾರ ನಮ್ಮ ರಾಜ್ಯಲ್ಲಿ ಯೂ SSLC PUC ಪರೀಕ್ಷೆಗಳನ್ನು ರದ್ದು ಮಾಡಿ ಇಲ್ಲವೇ ಆನ್ ಲೈನ್ ನಲ್ಲಿಯೇ ಪರೀಕ್ಷೆ ಮಾಡಿ ಎಂದು ನಮ್ಮೆಲ್ಲರ ಅಭಿಪ್ರಾಯವಾಗಿದೆ.

ಹೀಗಾಗಿ SSLC, PUC ಪರೀಕ್ಷೆಗಳನ್ನು ರದ್ದು ಮಾಡಿ ಇಲ್ಲವೇ ಆನ್ ಲೈನ್ ಮಾಡುವಂತೆ ಅಥವಾ ಆನ್ ಲೈನ್ ನಲ್ಲಿ ಪರೀಕ್ಷೆ ಮಾಡುವಂತೆ ನೊಂದ ಪೋಷಕ ರು ಒತ್ತಾಯ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.