ಕೊನೆಗೂ ರಾಜ್ಯಪಾಲರ ಅಂಕಿತ ಬಿತ್ತು ಶಿಕ್ಷಕರ ವರ್ಗಾವಣೆಯ ಸುಗ್ರಿವಾಜ್ಞೆಗೆ – ವರ್ಗಾವಣೆಯ ಸುಗ್ಗಿವಾಜ್ಞೆಯನ್ನು ಸ್ವಾಗತಿಸಿದರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು…..

Suddi Sante Desk

ಬೆಂಗಳೂರು –

ಕರೋನ ಮಹಾಮಾರಿಯ ನಡುವೆ ನಾಡಿನ ಶಿಕ್ಷಕ ರಿಗೆ ಕೊನೆಗೂ ರಾಜ್ಯಪಾಲರು ಸಿಹಿಸುದ್ದಿ ನೀಡಿದ್ದಾ ರೆ. ಕಳೆದ ಹಲವು ದಿನಗಳಿಂದ ವರ್ಗಾವಣೆಯ ನೀರಿಕ್ಷೆಯಲ್ಲಿದ್ದ ನಾಡಿನ ಶಿಕ್ಷಕರ ವರ್ಗಾವಣೆಯ ರಾಜ್ಯಪಾಲ ವಜೂಬಾಲಿವಾಲಾ ಅವರು ಅಂಕಿತ ಹಾಕಿದ್ದಾರೆ.ಹೌದು ವರ್ಗಾವಣೆ ವಿಚಾರ ಕುರಿತಂತೆ ಸೋಮವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ಪಡೆದು ನಂತರ ಸುಗ್ರವಾಜ್ಞೆಯನ್ನು ರಾಜ್ಯ ಪಾಲರ ಬಳಿ ಕಳಿಸಿದ್ದ ಕಡತಕ್ಕೆ ರಾಜ್ಯಪಾಲರು ಅಸ್ತು ಎಂದಿದ್ದಾರೆ. ಈ ಒಂದು ವಿಚಾರವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸ್ವಾಗತಿ ಸಿದೆ

ಹೌದು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಆಧ್ಯಾದೇಶ 2021 ಅನ್ನು ರಾಜ್ಯಪಾಲರ ಅಂಕಿತಕ್ಕಾಗಿ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಂಡನೆ ಮಾಡಿ ನಂತರ ಅದನ್ನು ರಾಜ್ಯಪಾಲರ ಬಳಿಗೆ ಕಳುಹಿಸಿ ಕೊಡಲಾಗಿತ್ತು.

ಗ್ರೀನ್ ಸಿಗ್ನಲ್ ನೀಡಿ ರಾಜ್ಯದಲ್ಲಿ ವರ್ಗಾವಣೆಯ ನೀರಿಕ್ಷೆಯಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಸಿಹಿ ಸುದ್ದಿಯ ನ್ನು ನೀಡಿದ್ದಾರೆ.ಈ ಒಂದು ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ಕಾಯ್ದೆಗೆ ಇಂದು ರಾಜ್ಯಪಾ ಲರು ಅಂಕಿತ ನೀಡಿ ಶಿಕ್ಷಕರ ವರ್ಗಾವಣೆಯ ನಿಯಂ ತ್ರಣ ತಿದ್ದುಪಡಿ ಕಾಯ್ದೆಗೆ ಅನುಮೋದನೆ ಕೊಟ್ಟಿದ್ದಾರೆ

ಈ ಕುರಿತಂತೆ ಇಂದು ವಿಶೇಷ ರಾಜ್ಯ ಪತ್ರಿಕೆಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಆಧ್ಯಾದೇಶ 2021 ಇದಕ್ಕೆ ಎಪ್ರೀಲ್ 29 ರಂದು ರಾಜ್ಯಪಾಲರ ಒಪ್ಪಿಗೆ ದೊರೆತಿದೆ.

ಇನ್ನೂಪ್ರಮುಖವಾಗಿ ಕಡ್ಡಾಯ ವರ್ಗಾವಣೆ ವಲ ಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರು ಹಂಚಿಕೆಯ ಮೇರೆಗೆ 2019-20ನೇ ವರ್ಷ ದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಈ ಒಂದು ಸಂದ ರ್ಭದಲ್ಲಿ ತಾಲೂಕಿನ ಹೊರಗೆ ಅಥವಾ ಪ್ರೌಢಶಾಲಾ ಶಿಕ್ಷಕರ ಸಂದರ್ಭದಲ್ಲಿ ಜಿಲ್ಲೆಯ ಹೊರಗೆ ವರ್ಗಾವ ಣೆಗೊಂಡ ಶಿಕ್ಷಕರ ಸಂಬಂಧದಲ್ಲಿ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರ ಣ) (ತಿದ್ದುಪಡಿ) ಆಧ್ಯಾದೇಶ 2021ರ ಪ್ರಾರಂಭದ ದಿನಾಂಕದ ನಿಕಟ ತರುವಾಯ ಮಾಡುವ ವರ್ಗಾವ ಣೆಯಲ್ಲಿ 2019-20ನೇ ಸಾಲಿನಲ್ಲಿ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ ಆ ಸಂಬಂಧಪಟ್ಟ ತಾಲೂಕು ಅಥವಾ ಜಿಲ್ಲೆಯೊಳಗೆ ಸ್ಥಳ ನಿಯುಕ್ತಿಯ ಪ್ರಯೋಜನವನ್ನು ನೀಡುವುದ ಕ್ಕಾಗಿ ಮುಂಬರುವ ವರ್ಗಾವಣೆಗಳಿಗೆ, ಪೂರ್ವದಲ್ಲಿ ಖಾಲಿ ಹುದ್ದೆಗಳ ಲಭ್ಯತೆಗೆ ಒಳಪಟ್ಟು ಅವರು ಕಾರ್ಯನಿರ್ವಹಿಸುತ್ತಿರುವ ತಾಲೂಕು ಅಥವಾ ಜಿಲ್ಲೆ ಯೊಳಗೆ ಒಂದು ಸಲದ ಕ್ರಮವಾಗಿ ನಿಯಮಿಸಬ ಹುದಾದಂತಹ ರೀತಿಯಲ್ಲಿ ವರ್ಗಾವಣೆಯ ಸ್ಥಳವ ನ್ನು ಆಯ್ಕೆ ಮಾಡಲು ಅವಕಾಶವನ್ನು ಈ ಒಂದು ಸುಗ್ರಿವಾಜ್ಞೆಯಲ್ಲಿ ಉಲ್ಲೇಖ ಮಾಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇನ್ನೂ ಈ ಒಂದು ವರ್ಗಾವಣೆಯ ಸುಗ್ರಿವಾಜ್ಞೆ ಕುರಿ ತಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇ ಖರ ನುಗ್ಗಲಿ ಸುದ್ದಿ ಸಂತೆ ಯೊಂದಿಗೆ ಮಾತನಾಡಿ ಈ ಒಂದು ಸುಗ್ರಿವಾಜ್ಞೆಯನ್ನು ಸ್ವಾಗತಿಸುವುದಾಗಿ ಹೇಳಿ ದರು.ಕಾಯ್ದೆಗಳಲ್ಲಿ ಹೊಸ ನಿಯಮಗಳು ಬಂದರೆ ಅನುಕೂಲ ಆಗುತ್ತವೆ ಹೈದರಾಬಾದ್ ಕರ್ನಾಟಕ ಭಾಗದ ಶಿಕ್ಷಕರಿಗೆ ಕೆಲವೊಂದಿಷ್ಟು ಅನುಕೂಲಗಳಾ ಬೇಕು ಹಾಗೇ ಇನ್ನೂಳಿದಂತೆ ಕೆಲವು ಮಾರ್ಪಾಡು ಗಳಾಬೇಕು ಅವೆಲ್ಲವುಗಳನ್ನು ಸಂಘವು ಗಮನದ ಲ್ಲಿಟ್ಟುಕೊಂಡು ಮುಂದಿನ ವರುಷ ಸಂಘದಿಂದ ಅನುಸ್ಠಾನಗೊಳಿಸುವಂತೆ ಕೆಲಸವನ್ನು ಮಾಡಲಾಗು ತ್ತದೆ ಎಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.