ಕೊಲ್ಕತ್ತಾ –
ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಗಲಾಟೆ ನಡೆದಿರುವುದು ಗೊತ್ತೇ ಇದೆ. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳದ ಇನ್ಸ್ ಪೆಕ್ಟರ್ ಜನರಲ್(ಐಜಿಪಿ) ಗ್ರೇಡ್ ಅಧಿಕಾರಿ ಹುಮಾಯುನ್ ಕಬೀರ್ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆಗೆ ಬಿಜೆಪಿ ಕಾರ್ಯಕರ್ತರು ಕಾರಣ ಎಂದು ಅವರು ಆರೋಪಿಸಿದ್ದಾರೆ.
ಚಂದನನಗರ ಪೊಲೀಸ್ ಕಮೀಷನರ್ ಆಗಿದ್ದ ಅವರು “ಉಗ್ರಗಾಮಿಗಳಿಗೆ ಗುಂಡು ಹೊಡೆಯಿರಿ” ಎಂದು ಹೇಳಿದ್ದ ಮೂವರು ಬಿಜೆಪಿ ಕಾರ್ಯಕರ್ತರ ಬಂಧನಕ್ಕೆ ಆದೇಶಿಸಿದ್ದರು. ಘಟನೆ ನಡೆದು ಕೆಲವೇ ದಿನದಲ್ಲಿ ಅವರು ರಾಜೀನಾಮೆ ನೀಡಿದ್ದಾರೆ.
ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ಕೊಡುತ್ತಿರುವುದಾಗಿ ತಮ್ಮ ಅಧಿಕೃತ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ, ಪ್ರತ್ಯೇಕ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ರಾಜೀನಾಮೆಗೆ ಆ ಮೂವರು ಕಾರಣ.ನಾನು ಅದನ್ನು ಹುದ್ದೆಯಿಂದ ಬಿಡುಗಡೆಯಾದ ನಂತರ ಕೆಲ ದಿನಗಳಲ್ಲಿ ವಿವರಿಸಲಿದ್ದೇನೆ ಎಂದಿದ್ದಾರೆ.