ಬೆಂಗಳೂರು –
ಕುರುಬ ಸಮಾಜಕ್ಕೆ ST ಮೀಸಲಾತಿ ಜಾರಿಗೆ ಆಗ್ರಹಿಸಿ ನಡೆದ ಧರಣಿಯಲ್ಲಿ ನಗರದ ಕೆ.ಆರ್.ಪುರಂ ಠಾಣೆಯ ಇನ್ಸ್ಪೆಕ್ಟರ್ ನಗಾರಿ ಬಾರಿಸುವ ಜೊತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹೌದು, ನಗಾರಿ ಬಾರಿಸಿದ ಇನ್ಸ್ಪೆಕ್ಟರ್ ಅಂಬರೀಶ್ ಪ್ರತಿಭಟನೆಯಲ್ಲಿ ಸಹ ಭಾಗಿಯಾದರು.
ಅಂದ ಹಾಗೆ, ಈ ಹಿಂದೆ ಸಹ ಇನ್ಸ್ಪೆಕ್ಟರ್ ಅವರು ಅಂಬರೀಶ್ ಇಂಥದ್ದೇ ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದರು.
ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜು ಅವರ ಬರ್ತ್ ಡೇ ಸಮಾರಂಭದಲ್ಲಿ ಭಾಗಿಯಾಗಿದ್ದ ಅಂಬರೀಶ್ ಆ ಸಂದರ್ಭದಲ್ಲಿ ಶಾಸಕರಿಗೆ ಬೆಳ್ಳೆ ಗದೆ ನೀಡಿ ಜೈಕಾರ ಕೂಗಿದ್ದರು.
ಆಗ ಆ ವಿಡಿಯೋ ಸಹ ಸಖತ್ ವೈರಲ್ ಆಗಿತ್ತು.ಸಧ್ಯ ಈಗ ಹೋರಾಟದಲ್ಲಿ ಪಾಲ್ಗೊಂಡು ಸಮುದಾಯದ ಬೇಡಿಕೆಗಳು ಕುರಿತು ಹೋರಾಟಗಾರರೊಂದಿಗಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಧ್ವನಿ ಎತ್ತಿದ್ದಾರೆ.