ಬೆಳ್ಳಂ ಬೆಳಿಗ್ಗೆ ರಾಜ್ಯದಲ್ಲಿ ಐದಾರು ಶಿಕ್ಷಕರು ಸಾವು – ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ ಭಯ ಬೇಡ ಕಾಳಜಿ ಇರಲಿ ಮನೆ ಯಲ್ಲಿ ಇರಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ

Suddi Sante Desk

ಬೆಂಗಳೂರು –

ಮಹಾಮಾರಿ ಕರೋನಾಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ. ದಿನದಿಂದ ದಿನಕ್ಕೆ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿದ್ದು ಇನ್ನೂ ಈ ಒಂದು ಕೋವಿಡ್ ಗೆ ರಾಜ್ಯದಲ್ಲಿ ಇಂದು ಕೂಡಾ ಐದು ಜನ ಶಿಕ್ಷಕರು ಸಾವಿಗೀಡಾಗಿದ್ದಾರೆ. ಹೌದು ರಾಜ್ಯದ ವಿವಿ ಧ ಕಡೆಗಳಲ್ಲಿ ಐದು ಜನ ಶಿಕ್ಷಕರು ಸಾವಿಗೀಡಾಗಿ ದ್ದಾರೆ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಂಗನ ಕುಪ್ಪೆ ಯ ಕೊರೋನಕ್ಕೆ ಬಲಿಯಾಗಿದ್ದಾರೆ. ಮೂರು ನಾಲ್ಕು ದಿನಗಳ ಹಿಂದೆ ಇವರಿಗೆ ಕೋವಿಡ್ ಸೋಂ ಕು ಕಾಣಿಸಿಕೊಂಡಿತ್ತು ಕೂಡಲೇ ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ನಂತರ ಚಿಕಿತ್ಸೆ ಫಲಿಸದೇ ಆಸ್ಪತ್ರೆ ಯಲ್ಲಿ ಸಾವಿಗೀಡಾಗಿದ್ದಾರೆ.

ಇನ್ನೂ ಇಂಡಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಗಣವಲಗ ಶಾಲೆಯ ತೀರ್ಥಪ್ಪ ಚಾಂದಕ ವಟೆ ಇವರು ಕೂಡಾ ಮಹಾಮಾರಿಗೆ ಬಲಿಯಾಗಿ ದ್ದಾರೆ. ಕಳೆದ ನಾಲ್ಕು ದಿನಗಳ ಇವರಿಗೆ ಕರೋನಾ ಸೋಂಕು ಕಾಣಿಸಿಕೊಂಡಿತ್ತು ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೂಡಲೇ ಆಸ್ಪತ್ರಗೆ ದಾಖಲು ಮಾಡಲಾಗಿತ್ತು ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಇನ್ನೂ ಅತ್ತ ದೇವದುರ್ಗ ತಾಲೂಕಿನ ಸುಂಕೇಶ್ವ ರಹಾಳ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಶ್ರೀಯುತ ಕಟ್ಟಪ್ಪ ಅವರು ಕೂಡಾ ಈ ಒಂದು ಮಹಾಮಾರಿಗೆ ಬಲಿಯಾಗಿದ್ದಾರೆ. ಇವರಿಗೂ ಒಂದು ವಾರದ ಹಿಂದೆ ಕರ್ತವ್ಯದ ಮೇಲಿದ್ದಾಗ ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರೆಗೆ ದಾಖ ಲಾಗಿದ್ದರು ಚಿಕಿತ್ಸೆ ಪಲಿಸದೇ ಇಂದು ಇವರು ಸಾವಿಗೀಡಾಗಿದ್ದಾರೆ.

ಇನ್ನೂ ರಮೇಶ್ ತಿಗಡಿ ಬೈಲಹೊಂಗಲ ಕುರಗುಂದ ಶಾಲೆಯ ಶಿಕ್ಷಕರು ಇವರು ಕೂಡಾ ಅಕಾಲಿಕವಾಗಿ ಮರಣವನ್ನು ಹೊಂದಿದ್ದಾರೆ.ಇವರ ನಿಧನದಿಂದಾಗಿ ಅಲ್ಲಿನ ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.

ಇತ್ತ ಹಗರಿ ಬೊಮ್ಮನಹಳ್ಳಿಯ ಹಂಪಸಾಗರ ಕ್ಲಸ್ಟರ್ ಕ್ರಿಯಾಶೀಲ CRP ವೆಂಕಟೇಶ ನಾಯ್ಕ್ ಇವರು ಕೊವಿಡ್ ಗೆ ಬಲಿಯಾಗಿದ್ದಾರೆ.ಇವರ ಸಾವು ಅತ್ಯಂತ ನೋವಿನ‌ ಸಂಗತಿಯಾಗಿದ್ದು ಇವರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಯನ್ನು ಭಗವಂತ ಕೊಡಲಿ ಎಂದು ಹಂಪಸಾಗರ ಕ್ಲಸ್ಪರ್ ಬಳದವರು ಪ್ರಾರ್ಥನೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರದ ಬಾಗೆಪಲ್ಲಿಯ ವೆಂಕಟರಮನಪ್ಪ ಶಿಕ್ಷಕರು ಕೂಡಾ ಕೋವಿಡ್ ಗೆ ಸಾವಿಗೀಡಾಗಿದ್ದಾರೆ. ಇನ್ನೂ ಕೆ ವಿ ಕಡಿವಾಲ ಸರಕಾರಿ ಹಿರಿಯ ಪ್ರಾಥಮಿ ಕ ಶಾಲೆಯ ಶಿಕ್ಷಕ ಇವರು ಕೂಡಾ ಚಿಕ್ಕ ವಯಸ್ಸಿನವ ರಾಗಿದ್ದರೂ ಕೂಡಾ ಕೋವಿಡ್ ಗೆ ಬಲಿಯಾಗಿದ್ದಾರೆ. ಇವರ ನಿಧನಕ್ಕೆ ವೀರಾಪೂರ ಶಾಲೆಯ ಸರ್ವ ಸಿಬ್ಬಂದಿಗಳು ಸಂತಾಪವನ್ನು ಸೂಚಿಸಿದ್ದಾರೆ.

ಇನ್ನೂ ಇದರೊಂದಿಗೆ ಇನ್ನೂ ರಾಜ್ಯದ ಹಲವು ಭಾಗಗಳಲ್ಲಿ ಶಿಕ್ಷಕರು ಕೋವಿಡ್ ಗೆ ಬಲಿಯಾಗಿ ದ್ದಾರೆ. ದಯಮಾಡಿ ಶಿಕ್ಷಕ ಬಂಧುಗಳೇ ಭಯಬೇಡ ಆತಂಕ ಬೇಡ ದಯಮಾಡಿ ಕಾಳಜಿ ಇರಲಿ ನಿರ್ಲಕ್ಷ್ಯ ಬೇಡ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಮನೆಯಲ್ಲಿ ಇರಿ ಆರೋಗ್ಯವಾಗಿರಿ. ಇದು ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿನಂತಿಯಾಗಿದ್ದು ಇದರೊಂದಿಗೆ ನಾಡಿನ ತುಂಬೆಲ್ಲಾ ಮೃತರಾದ ಶಿಕ್ಷಕರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯ ರಾದ ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕ ರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ, ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾ ಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು,ನಾಗವೇಣಿ,ಇಂದಿರಾ.ಮುಕಾಂಬಿಕಾ ಭಟ್.ನಾಗರತ್ನ,ಲಕ್ಷ್ಮೀದೇವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಹನಮಂತಪ್ಪ ಬೂದಿಹಾಳ ಸೇರಿ ದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾ ರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಪರಿಹಾರ ನೀಡುವಂತೆ ಒತ್ತಾಯವನ್ನು ಮಾಡಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.