ಹುಬ್ಬಳ್ಳಿ –
ಕೊರೊನಾ ಮಹಾಮಾರಿಯ ನಡುವೆ ಬಿಡುವಿಲ್ಲದೆ ಕೆಲಸ ಮಾಡಿದ 108 ಸಿಬ್ಬಂದಿಗಳಿಗೆ ಹುಬ್ಬಳ್ಳಿಯಲ್ಲಿ ಪ್ರಜಾವಾಣಿ ಪತ್ರಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.ನಗರದ ಪ್ರಜಾವಾಣಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವಿರತವಾಗಿ ಬಿಡುವಿಲ್ಲದೇ ಕೆಲಸ ಮಾಡಿದ 108 ಸಿಬ್ಬಂದಿಗಳಿಗೆ ಪತ್ರಿಕೆಯಿಂದ ಪ್ರೀತಿಯ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಅಂತರರಾಷ್ಟ್ರೀಯ ಮಾಜಿ ಅಥ್ಲೀಟ್ ವಿಲಾಸ ನೀಲಗುಂದ, ಶ್ರೀದತ್ತ ಫೌಂಡೇಷನ್ ಅಧ್ಯಕ್ಷ ಪ್ರಕಾಶ ಜೋಶಿ, ಪ್ರಜಾವಾಣಿ ಪತ್ರಿಕೆಯ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥೆ ರಶ್ಮಿ ಎಸ್. ಹಾಗೂ ಜಾಹೀರಾತು ವಿಭಾಗದ ಎಜಿಎಂ ದಿವಾಕರ ಭಟ್ ಸೇರಿದಂತೆ ಪತ್ರಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇನ್ನೂ ಇದೇ ವೇಳೆ 108 ತುರ್ತು ವಾಹನದ ಸಿಬ್ಬಂದಿಗಳಾದ ರಫೀ ಅತ್ತಾರ, ಶಾಂತಯ್ಯ ಹಿರೇಮಠ, ವಾಸುದೇವ, ಶಿವಾನಂದ ಬೆಳವಂಕಿ, ಕೃಷ್ಣಪ್ಪ ದಾಸರ, ಇವರಿಗೆ ಪತ್ರಿಕೆಯ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು. ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ 108 ಸ್ಥಳೀಯ ಮ್ಯಾನೇಜರ್ ಮಹಮ್ಮದ್ ಶಫೀ ದಪ್ಪೇದಾರ ಉಪಸ್ಥಿತರಿದ್ದರು.