ಪರೀಕ್ಷಾ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಲೇರಿದ ವಿದ್ಯಾರ್ಥಿಗಳು…..

Suddi Sante Desk

ಬೆಂಗಳೂರು –

ಕರೋನ ಹಿನ್ನಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಈ ಬಾರಿ ರದ್ದು ಮಾಡಲಾಗಿದೆ.ಇದರ ಬೆನ್ನಲ್ಲೇ ಕಳೆದ ವರ್ಷ PUC ಯಲ್ಲಿ ಅನುತ್ತೀರ್ಣಗೊಂಡ ಅಥವಾ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಈಗ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಹೌದು ಇದಕ್ಕೆ ಕಾರಣ ಈ ವರ್ಷದ ಪರೀಕ್ಷೆಯನ್ನು ಸರ್ಕಾರ ರದ್ದು ಮಾಡಿದ್ದರೂ ಕಳೆದ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ.ಒಂದು ಅಥವಾ ಕೆಲವು ವಿಷಯಗಳಲ್ಲಿ ಅನುತ್ತೀರ್ಣಾದ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ಮಾಡುವುದು ಸರಿಯಲ್ಲ ಎಂದು ನಿರ್ಧರಿಸಿರುವ ಸರ್ಕಾರ ಅವರಿಗೆ ಆ ವಿಷಯಗಳ ಪರೀಕ್ಷೆಯನ್ನು ಮಾಡಲು ನಿರ್ಧರಿಸಿ ರುವುದು ಈ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾ ಗಿದೆ.

ಈ ವರ್ಷ ಎಲ್ಲಾ ಮಕ್ಕಳು ತೇರ್ಗಡೆಯಾಗಿ ಮುಂದಿ ನ ತರಗತಿಗೆ ಹೋಗುತ್ತಿರುವಾಗ ತಾವು ಮಾತ್ರ ಪುನಃ ಪರೀಕ್ಷೆ ಬರೆದು ಫಲಿತಾಂಶವನ್ನು ಕಾಯುವಂತಾಗು ವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಈ ವಿದ್ಯಾ ರ್ಥಿಗಳ ಪ್ರಶ್ನೆಯಾಗಿದೆ‌ ಹೀಗಾಗಿ ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಧ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ

ಎಸ್.ವಿ.ಸಿಂಗ್ರೇಗೌಡ ಎಂಬುವವರ ಪರವಾಗಿ ವಕೀಲರಾದ ಆರ್.ಪಿ.ಸೋಮಶೇಖರಯ್ಯ ಹಾಗೂ ಆರ್.ಎಲ್.ರಂಗ ಸ್ವಾಮ್ಯ ಅವರು ಅರ್ಜಿ ಸಲ್ಲಿಸಿ ದ್ದಾರೆ. ರಿಪೀಟರ್ಸ್‌ ವಿದ್ಯಾರ್ಥಿಗಳು ಸುಮಾರು 95 ಸಾವಿರ ಇದ್ದು ಅವರಿಗೆ ಸರ್ಕಾರದ ಈ ದ್ವಂದ್ವ ನಿಲುವಿನಿಂದ ತೊಂದರೆಯಾಗಿದೆ.ರೆಗ್ಯುಲರ್‌ ವಿದ್ಯಾರ್ಥಿಗಳಿಗೆ ಒಂದು ನ್ಯಾಯ ರಿಪೀಟರ್ಸ್‌ಗೆ ಇನ್ನೊಂದು ನ್ಯಾಯ ಏಕೆ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.ಪರೀಕ್ಷೆ ರದ್ದು ಮಾಡಿದರೆ ಎಲ್ಲಾ ವಿದ್ಯಾರ್ಥಿಗಳಿಗೂ ರದ್ದು ಮಾಡಿ, ಇಲ್ಲದಿದ್ದರೆ ಎಲ್ಲರಿಗೂ ಪರೀಕ್ಷೆ ನಡೆಸಿ ಎಂದು ಅರ್ಜಿದಾರರು ಕೋರಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.