ಹುಬ್ಬಳ್ಳಿ –
ಹುಬ್ಬಳ್ಳಿ ತಾಲ್ಲೂಕಿನ ಕಟ್ನೂರ ಗ್ರಾಮದಲ್ಲಿ ಈ ಹಿಂದೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದರು.

ಗ್ರಾಮದ ಕಟ್ನೂರು ಗ್ರಾಮ ಪಂಚಾಯತಿಯ ಒಟ್ಟು15 ಸ್ಥಾನಗಳಲ್ಲಿ ಕಟ್ನೂರಿನ 5 ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ. ಆದರೂ ಈಗ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಮಾಡುತ್ತಿದ್ದಾರೆ .

ಚುನಾವಣೆ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು ಸ್ಪಂದಿಸಲಿಲ್ಲ ಹೀಗಾಗಿ ನಿನ್ನೆ ತುರ್ತಾಗಿ ಧಾರವಾಡದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು ಗ್ರಾಮಸ್ಥರು ಅಲ್ಲೂ ಫಲಿತಾಂಶ ಸಿಗದ ಹಿನ್ನಲೆಯಲ್ಲಿ ಇಂದು ಕಟ್ನೂರ ಗ್ರಾಮದಲ್ಲಿ ಗ್ರಾಮಸ್ಥರು ಸೇರಿಕೊಂಡು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

ಚುನಾವಣೆ ಪ್ರಕ್ರಿಯೆ ಖಂಡಿಸಿ ಗ್ರಾಮಸ್ಥರು ಪಂಚಾಯತ ಮುಂದೆ ಪ್ರತಿಭಟನೆ ಮಾಡಿ ಇಂದು ನಡೆಯಲಿರುವ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆಯನ್ನು ವಿರೋಧಿಸಲಿದ್ದಾರೆ. ಕಟ್ನೂರು ಗ್ರಾಮ ಪಂಚಾಯತಿ ಒಟ್ಟು 14 ಸ್ಥಾನಗಳಲ್ಲಿ 5 ಸ್ಥಾನಗಳಿಗೆ ಕಟ್ನೂರಿನಲ್ಲಿ ಚುನಾವಣೆ ನಡೆದಿಲ್ಲ ಹೀಗಿರುವಾಗ ಈಗ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮಾವನೂರು,ಗಿರಿಯಾಲ,ಬುಡರಸಿಂಗಿ ಮೂರು ಊರುಗಳಿಗೆ ಆಯ್ಕೆಯಾದ ಅಭ್ಯರ್ಥಿ ಗಳಲ್ಲಿ ಮಾತ್ರ ಚುನಾವಣೆ ಮಾಡುತ್ತಿದ್ದು ಇದರಿಂದಾಗಿ ಕಟ್ನೂರ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.ಇಂದು ನಡೆಯುವ ಚುನಾವಣೆಯನ್ನು ಮಾಡಿಕೊಡಲು ಬಿಡೊದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.