ಬೆಂಗಳೂರು –
Dysp ಲಕ್ಷ್ಮೀ ಅವರು ಆತ್ಮಹತ್ಯೆ ಮಾಡಿಕೊಂಡು 50 ದಿನಗಳು ಕಳೆದಿವೆ. 50 ದಿನಗಳಾದರೂ ಇನ್ನೂ ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆಯನ್ನು ಯಾಕೇ ಮಾಡಿಕೊಂಡರು ಪ್ರಕರಣಕ್ಕೆ ಪ್ರಮುಖ ಕಾರಣ ಏನು ಈವರೆಗೆ ಈ ಒಂದು ಕಾರಣ ಪತ್ತೆಯಾಗದೆ ನಿಗೂಢವಾಗಿಯೇ ಉಳಿದಿದೆ.

ಈ ಸಂಬಂಧ ಅನ್ನಪೂರ್ಣೇಶ್ವರಿ ನಗರದ ಠಾಣೆ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರ ವರದಿ ನಿರೀಕ್ಷೆಯಲ್ಲಿದ್ದಾರೆ. ಇತ್ತ ಒಂದೂವರೆ ತಿಂಗಳು ಉರುಳಿದರೂ ಸಹ ತಜ್ಞರ ವರದಿ ಸಲ್ಲಿಕೆಯಾಗಿಲ್ಲ. ಇದರಿಂದ ಪ್ರಕರಣ ಮತ್ತಷ್ಟು ಜಟಿಲವಾಗಿದೆ ಎನ್ನಲಾಗಿದೆ.

2014ನೇ ಸಾಲಿನ ಡಿವೈಎಸ್ಪಿ ಆಗಿದ್ದ ಲಕ್ಷ್ಮೀ, ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಾಗರಬಾವಿ ಸಮೀಪ ಸ್ನೇಹಿತನ ಮನೆಯಲ್ಲಿ ಡಿ.16 ರಂದು ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು

50 ದಿನ ಕಳೆದರು ಈ ಘಟನೆ ನಿಖರ ಕಾರಣ ಪತ್ತೆಯಾಗಿರಲಿಲ್ಲ. ಇನ್ನೂ ಈ ಪ್ರಕರಣ ಸಂಬಂಧ ಮೃತರ ಪತಿ, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸೇರಿದಂತೆ ಹಲವು ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಆತ್ಮಹತ್ಯೆಗೆ ಹಿಂದಿನ ಸ್ಪಷ್ಟವಾದ ಕಾರಣ ಮಾತ್ರ ಬಹಿರಂಗವಾಗಿಲ್ಲ