ಶ್ರೀರಂಗಪಟ್ಟಣ –
ಶ್ರೀರಂಗಪಟ್ಟಣ ತಾಲೂಕು ಕಚೇರಿಯ ಆರ್‌ಆರ್‌ಟಿ ಶಾಖೆ ಗುಮಾಸ್ತ ಪಿ. ಮಂಜುನಾಥ ಲಂಚ ಸ್ವೀಕಾರ ಮಾಡುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮದ ಧರಣೇಂದ್ರಕುಮಾರ್ ಎಂಬುವರಿಂದ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ.ಮಂಡ್ಯ ಎಸಿಬಿ ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಸತೀಶ್, ರವಿಶಂಕರ್ ಹಾಗೂ ಸಿಬ್ಬಂದಿ ಲಂಚದ ಹಣದ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕು ನಾಗರೀಕರ ಹಿತರಕ್ಷಣ ವೇದಿಕೆ ವತಿಯಿಂದ ಮಂಡ್ಯ ಎಸಿಬಿಗೆ ನೀಡಿದ್ದ ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ತಾಲೂಕು ಕಚೇರಿಗೆ ದಾಳಿ ಮಾಡಿ ತನಿಖೆ ಕೈಗೊಂಡರು. ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದ ರೈತ ಧರಣೀಶ್ ಅವರು ಜಮೀನಿನ ಕಾರ್ಯನಿಮ್ಮತ್ತ ಕಂದಾಯ ಇಲಾಖೆಯ ರೂಂ ನಂ 9 ರಲ್ಲಿ ಮಂಜುನಾಥ್ ಎಂಬ ಅಧಿಕಾರಿ ಕೆಲಸ ಮಾಡಿಕೊಡಲು 3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಫೋನ್ ಮೂಲಕವೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ದೂರುದಾರ ರೈತ, ಫೋನ್ ಕರೆ ದಾಖಲಿಸಿ ನಾಗರೀಕ ಹಿತರಕ್ಷಣಾ ವೇದಿಕೆಯೊಂದಿಗೆ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.ವೇದಿಕೆ ಅಧ್ಯಕ್ಷ ಚಂದನ್, ಕಾರ್ಯದರ್ಶಿ ಮದನ್‌ರಾವ್, ಸದಸ್ಯ ರಾದ ರವಿ, ಹೇಮಂತ್, ಪ್ರವೀಣ್, ಶ್ಯಾಂ ರಾವ್ ಮತ್ತಿತರರಿದ್ದರು.