ಬೆಂಗಳೂರು –
2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗವು ಪ್ರಕಟಿಸಿದೆ. ಮುಖ್ಯ ಪರೀಕ್ಷೆಯು ದಿನಾಂಕ 13-02-2021ರಿಂದ ಆರಂಭಗೊಂಡು, ದಿನಾಂಕ 16-02-2021ರವರೆಗೆ ನಡೆಯಲಿದೆ.
ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 2017-18 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆ ದಿನಾಂಕ 13-02-2021ರಿಂದ ಆರಂಭಗೊಂಡು, ದಿನಾಂಕ 16-02-2021ರವರೆಗೆ ನಡೆಯಲಿದೆ ಎಂಬುದಾಗಿ ತಿಳಿಸಿ
ಹೀಗಿದೆ ಗೆಜೆಟೆಡ್ ಪ್ರೊಬೇಷನರ್ಸ್ 2017-18ನೇ ಸಾಲಿನ ಮುಖ್ಯ ಪರೀಕ್ಷೆಯ ವೇಳಾಪಟ್ಟಿ
ದಿನಾಂಕ 13-02-2021, ಕನ್ನಡ, ಬೆಳಿಗ್ಗೆ 10ರಿಂದ 12 ಗಂಟೆಯವರೆಗೆ
ದಿನಾಂಕ 13-02-2021, ಇಂಗ್ಲಿಷ್, ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ
ದಿನಾಂಕ 14-02-2021, ಪ್ರಬಂಧ, ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ
ದಿನಾಂಕ 15-02-2021, ಸಾಮಾನ್ಯ ಅಧ್ಯಯನ-1, ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ
ದಿನಾಂಕ 15-02-2021, ಸಾಮಾನ್ಯ ಅಧ್ಯಯನ-2, ಮಧ್ಯಾಹ್ನ 2 ರಿಂದ 5ರವರೆಗೆ
ದಿನಾಂಕ 16-02-2021, ಸಾಮಾನ್ಯ ಅಧ್ಯಯನ-3, ಬೆಳಿಗ್ಗೆ 9 ರಿಂದ 12ರವರೆಗೆ
ದಿನಾಂಕ 16-02-2021, ಸಾಮಾನ್ಯ ಅಧ್ಯಯನ-4, ಮಧ್ಯಾಹ್ನ 2ರಿಂದ 5ರವರೆಗೆ ಹೀಗೆ ಪರೀಕ್ಷೆಗಳು ನಡೆಯಲಿವೆ.