ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕ ವರ್ಗಾವಣೆಯ ನೀತಿ ಶಿಕ್ಷಕರಿಗೆ ಯಾಕೇ…..ಎಲ್ಲವೂ ಬದಲಾದರೂ ಬದಲಾಗದ ಶಿಕ್ಷಕರ ವರ್ಗಾವಣೆ ನೀತಿ……

Suddi Sante Desk

ಬೆಂಗಳೂರು –

ಸಾಮಾನ್ಯವಾಗಿ ರಾಜ್ಯದಲ್ಲಿ ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ಸಲೀಸಾಗಿ ಸುಲಭವಾಗಿ ನಡೆಯುತ್ತದೆ. ಅವರಿವರ ಪತ್ರವನ್ನು ತಗೆದುಕೊಂಡು ಶಿಫಾರಸ್ಸನ್ನು ಮಾಡಿಸಿ ಕೊನೆಗೆ ವರ್ಷಕ್ಕೊಮ್ಮೆ ನಡೆಯುವ ಸಾಮಾನ್ಯ ವರ್ಗಾವಣೆಗೆಯಲ್ಲಾದರೂ ವರ್ಗಾವಣೆ ಭಾಗ್ಯ ಇದೆ.ಆದರೆ ಇತ್ತ ಶಿಕ್ಷಕರಿಗೆ ಮಾತ್ರ ವಿಚಿತ್ರ ವಾದ ವರ್ಗಾವಣೆಯ ಕಾಯಿದೆ.ಆರಂಭದಿಂದ ಈವರೆಗೆ ರಾಜ್ಯದಲ್ಲಿ ಆಳ್ವಿಕೆಯನ್ನು ಮಾಡಿದ ಅದೇಷ್ಟೋ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರು ಶಿಕ್ಷಣ ಇಲಾಖೆಯಿಂದ ಆಯ್ಕೆಯಾಗಿ ಹೋಗಿರುವ ಜನಪ್ರತಿನಿಧಿಗಳು ಮಾತ್ರ ಅವೈಜ್ಞಾನಿಕವಾದ ಈ ಒಂದು ವರ್ಗಾವಣೆಯ ನೀತಿಯನ್ನು ಬದಲಾಯಿಸಿಲ್ಲ

ಹೀಗಾಗಿ ಶಿಕ್ಷಕರ ವರ್ಗಾವಣೆ ನೀತಿ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಜಟಿಲವಾಗತ್ತಾ ಬರುತ್ತಿದೆ.ಇನ್ನೂ ಇದು ಒಂದೆಡೆಯಾದರೆ ಇನ್ನೂ ನೆರೆಯ ಪಶ್ಚಿಮ ಬಂಗಾಲದಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರು ಅಲ್ಲಿನ ಶಿಕ್ಷಕರಿಗೆ ಅವರು ಹುಟ್ಟಿ ಬೆಳೆದ ಸ್ವತಃ ತಾಲೂಕಿನ ಸೇವೆ ಸಲ್ಲಿಸಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ.ಆದರೆ ನಮ್ಮ ರಾಜ್ಯದಲ್ಲಿ ವಿಚಿತ್ರ ವಾದ ವರ್ಗಾವಣೆ ನೀತಿ ಈಗಲೂ ಇದೆ ಏನೇಲ್ಲಾ ಬದಲಾದರೂ ಕೂಡಾ ಈ ಒಂದು ನೀತಿ ಕಾಯಿದೆ ಮಾತ್ರ ಬದಲಾಗುತ್ತಿಲ್ಲ.

ಇನ್ನೂ ಹುಟ್ಟಿದ್ದು ಒಂದು ಊರು ಸಧ್ಯ ಕರ್ತವ್ಯ ಮಾಡುತ್ತಿರುವುದು ಮತ್ತೊಂದು ಊರು. ಮೂರು ನೂರಕ್ಕೂಅಧಿಕ ಕಿಲೋಮೀಟರ ದೂರದವರೆಗೆ ಸೇವೆ ಸಲ್ಲಿಸುತ್ತಾ ಕರ್ತವ್ಯವನ್ನು ಶಿಕ್ಷಕ ಬಂಧುಗಳು ರಾಜ್ಯದಲ್ಲಿ ಮಾಡ್ತಾ ಇದ್ದಾರೆ.ಒಂದು ಕಡೆ ಅವರು ಇನ್ನೊಂದು ಕಡೆ ಇವರು ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ಪೋಷಕರು ಹೀಗೆ ದಿಕ್ಕಿಗೊಬ್ಬರಾಗಿದ್ದುಕೊಂಡು ಎಲ್ಲವನ್ನೂ ಬಿಟ್ಟು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಕೆಲಸವನ್ನು ಮಾಡುತ್ತಿದ್ದಾರೆ.

ಮಾನಸಿಕ ನೆಮ್ಮದಿ ಇಲ್ಲದೇ ಅದೇಗೆ ಪಾಠ ಮಾಡಲು ಸಾಧ್ಯವಾಗುತ್ತದೆ.ರಾಜ್ಯದಲ್ಲಿ ಶಿಕ್ಷಕರ ಉದ್ದಾರಕ್ಕಾಗಿ ಉದಯಿಸಿರುವ ಎಲ್ಲಾ ಶಿಕ್ಷಕರ ಸಂಘಗಳು ಸೇರಿಕೊಂಡು ಮುಖ್ಯಮಂತ್ರಿ ಶಿಕ್ಷಣ ಸಚಿವರನ್ನು ಭೇಟಿಯಾಗಿ ವರ್ಗಾವಣೆಯನ್ನು ಸಮಸ್ಯೆಯನ್ನು ಪರಹರಿಸೋದು ಸಾಧ್ಯವಿದೆ. ಆದರೆ ಮನಸ್ಸು ಮಾಡಿದರೆ ಇದೇನು ದೊಡ್ಡದೇನು ಸಮಸ್ಯೆಯೇನಲ್ಲ ಹೀಗಿರುವಾಗ ವರ್ಗಾವಣೆ ವಿಲ್ಲದೇ ನರಕಯಾತನೆಯನ್ನು ಅನುಭವಿಸುತ್ತಿರುವ ನಾಡಿನ ಮುಗ್ದ ನೋಂದುಕೊಂಡಿರುವ ಶಿಕ್ಷಕರ ಪ್ರಶ್ನೆಯಾಗಿದೆ.

ಆದ್ದರಿಂದ ಇನ್ನಾದರೂ ಮುಖ್ಯಮಂತ್ರಿ ಶಿಕ್ಷಣ ಸಚಿವರು ಶಿಕ್ಷಕರ ಸಂಘಗಳು ಈ ಒಂದು ವರ್ಗಾವಣೆ ಎಂಬ ಪೆಂಡಭೂತವಾಗಿ ಬೆಳೆದಿರುವ ಈ ಒಂದು ಸಮಸ್ಯೆಯನ್ನು ಇತ್ಯರ್ಥ ಮಾಡಿ ಅವರವರ ತಾಲೂಕಿನಲ್ಲಿ ಶಿಕ್ಷಕರು ಸೇವೆ ಮಾಡಲು ಅವಕಾಶವನ್ನು ಮಾಡಿಕೊಟ್ಟಿದ್ದಾದರೆ.ನಮ್ಮ ನಾಡಿನಲ್ಲಿ ಗುಣಾತ್ಮಕ ಶಿಕ್ಷಣ ದೊರೆಯವುದರಲ್ಲಿ ಸಂದೇಹವಿಲ್ಲ.ನಾಡಿನ ಪ್ರಜ್ಞಾವಂತ ಶಿಕ್ಷಣ ತಜ್ಞರು ಚಿಂತಕರು ಈಕುರಿತು ಸರ್ಕಾರದ ಗಮನಕ್ಕೆ ತರುವುದು ತುಂಬಾ ಅವಶ್ಯಕವಿದೆ.ಇದರ ನಿರೀಕ್ಷೆ ಯಲ್ಲಿ ನಾಡಿನ ಶಿಕ್ಷಕರಿದ್ದಾರೆ.ಕರ್ನಾಟಕದಲ್ಲಿ ಯಾವುದೇ ಸರ್ಕಾರ ಬರಲಿ ಶಿಕ್ಷಕರ ವರ್ಗಾವಣೆಯ ಸಮಸ್ಯೆ ಜೀವಂತವಾಗಿಯೇ ಇದೆ ಯಾಕೆ ಎಂಬೊದು ಯಕ್ಷ ಪ್ರಶ್ನೆಯಾಗಿದ್ದು ಇನ್ನಾದರೂ ಶಿಕ್ಷಕರಿಗೆ ದೊಡ್ಡ ತಲೆನೋವಾಗಿರುವ ಈ ಒಂದು ಅವೈಜ್ಞಾನಿಕವಾದ ವರ್ಗಾವಣೆ ನೀತಿಯನ್ನು ರದ್ದು ಮಾಡಿ ಎಲ್ಲಾ ಇಲಾಖೆಗಳ ಹಾಗೇ ಸರಳವಾಗಿ ಮಾಡತಾರೆನಾ ಎಂಬುದನ್ನು ಕಾದು ನೋಡಬೇಕು ಇಲ್ಲವಾದರೆ ಮತ್ತೆ ಅದೇ ಪರಸ್ಥಿತಿಯಾದರೆ ಮತ್ತೆ ನಾಡಿನ ಶಿಕ್ಷಕರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.