ಬೆಂಗಳೂರು ಚಲೋ ಹೋರಾಟ ಕ್ಕೆ ಸಿದ್ದವಾಗುತ್ತಿದೆ ಶಿಕ್ಷಕರ ಹೋರಾಟ – ಮೊದಲ ದಿನವೇ ನೂರಾರು ಶಿಕ್ಷಕರ ಹೆಸರು ನೋಂದಣಿ – ಆನ್ ಲೈನ್ ನಲ್ಲಿಯೇ ಬಲಗೊಳ್ಳುತ್ತಿದೆ ಹೋರಾಟದ ಶಕ್ತಿ…..

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ವಿಚಾರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ.ಅವೈಜ್ಞಾನಿಕವಾದ ಈ ಒಂದು ವರ್ಗಾವಣೆಯ ನೀತಿಯ ವಿರುದ್ದ ನಾಡಿನ ಶಿಕ್ಷಕರು ಈಗ ಬೀದಿಗಿಳಿಯುವ ಪ್ಲಾನ್ ಮಾಡತಾ ಇದ್ದಾರೆ. ಹೌದು ಈವರೆಗೆ ನ್ಯಾಯಯುತ ವರ್ಗಾವಣೆಯ ನೀತಿ ಜಾರಿಗೆ ತಗೆದುಕೊಂಡು ಬನ್ನಿ ಎಂದು ಹೇಳಿ ಹೇಳಿ ಬೇಸತ್ತು ಶಿಕ್ಷಕ ಬಂಧುಗಳು ಈಗ ಹೋರಾಟದ ಶಕ್ತಿಯನ್ನು ರೂಪಿಸುತ್ತಿದ್ದಾರೆ.

ಶಿಕ್ಷಕ ಕರ್ತವ್ಯಕ್ಕೆ ಸೇರಿಕೊಂಡಾಗಿನಿಂದ ಈವರೆಗೆ ಅದೇ ಸ್ಥಳದಲ್ಲಿ ಒಂದು ಕಡೆಗೆ ನೌಕರಿ ಮತ್ತೊಂದು ಕಡೆಗೆ ಊರು ಇನ್ನೊಂದು ಕಡೆಗೆ ಕುಟುಂಬ ಮತ್ತೊಂದು ಕಡೆಗೆ ಪೋಷಕರು ಹೀಗೆ ನಾಲ್ಕು ದಿಕ್ಕಿನಲ್ಲಿನ ಜೀವನವನ್ನು ಮಾಡುತ್ತಾ ನೆಮ್ಮದಿ ಇಲ್ಲದೇ ಶಿಕ್ಷಕರು ಕರ್ತವ್ಯವನ್ನು ಮಾಡತಾ ಇದ್ದಾರೆ. ಹೀಗಿರುವಾಗ ನ್ಯಾಯ ಸಮ್ಮತವಾದ ಬೇಡಿಕೆಗಳ ವರ್ಗಾವಣೆ ಕುರಿತಂತೆ ಹೇಳಿ ಹೇಳಿ ಕೇಳಿ ಕೇಳಿ ಬೇಸತ್ತ ನಾಡಿನ ಶಿಕ್ಷಕರು ಈಗ ಬೆಂಗಳೂರು ಚಲೋ ಮಾಡಲು ಮುಂದಾಗಿದ್ದಾರೆ.

ಈಗಾಗಲೇ ಈ ಕುರಿತಂತೆ ರಾಜ್ಯ ಮಟ್ಟದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಆಂದೋಲನ ಆರಂಭಗೊಂಡಿದ್ದು ನೋಂದುಕೊಂಡಿರುವ ಶಿಕ್ಷಕರೆಲ್ಲರೂ ಸೇರಿಕೊಂಡು ಈ ಒಂದು ಹೋರಾಟದ ರೂಪರೇಷೆಯನ್ನು ಮಾಡತಾ ಇದ್ದಾರೆ.ಇಂದಿನಿಂದ ಹೋರಾಟದಲ್ಲಿ ಪಾಲ್ಗೊಳ್ಳಲು ಆನ್ ಲೈನ್ ನಲ್ಲಿಯೇ ನೋಂದಣಿ ಕಾರ್ಯ ಆರಂಭವಾಗಿದ್ದು ಮೊದಲನೇಯ ದಿನವಾದ ಇಂದು ಒಂದೇ ದಿನ ಹೋರಾಟಕ್ಕೆ ನಾಡಿನ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಶಿಕ್ಷಕರು ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಬೆಂಬಲವನ್ನು ಸೂಚಿಸಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂ ಡಿದ್ದಾರೆ.

ಈಗಲೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಈ ಒಂದು ಬೆಂಗಳೂರು ಚಲೋಗೆ ಬೆಂಬಲ ಕಂಡು ಬರುತ್ತಿದ್ದು ಇನ್ನೇನು ಎರಡು ಮೂರು ದಿನಗಳಲ್ಲಿ ಅಪಾರ ಸಂಖ್ಯೆಯಲ್ಲಿ ಶಿಕ್ಷಕರು ಈ ಒಂದು ಬೆಂಗಳೂರು ಚಲೋಗೆ ತಮ್ಮ ಹೆಸರನ್ನು ನೊಂದಣಿ ಮಾಡಿಕೊಂಡು ದೊಡ್ಡ ಶಕ್ತಿಯ ಸಂಖ್ಯೆಯೊಂದಿಗೆ ಬೆಂಗಳೂರು ಚಲೋ ದಿನಾಂಕ ಅಂತಿಮವಾಗಲಿದ್ದು ಇದಕ್ಕೂ ಮುನ್ನ ಬೆಂಗಳೂರಿಗೆ ಹೋಗುವ ಶಿಕ್ಷಕರನ್ನು ಬೀದಿಗಿಳಿಸುವ ಮುನ್ನ ಶಿಕ್ಷಣ ಸಚಿವರು ತಾವೊಬ್ಬರು ಶಿಕ್ಷಕಿಯೊಬ್ಬರ ಮಗನಾಗಿದ್ದುಕೊಂಡು ಶಿಕ್ಷಕರ ಸಮಸ್ಯೆಗೆ ಸ್ಪಂದಿಸೊದು ಅವಶ್ಯವಿದೆ ಇಲ್ಲವಾದರೆ ಮತ್ತೊಂದು ದೊಡ್ಡ ಪ್ರಮಾಣದಲ್ಲಿನ ಹೋರಾಟ ರಾಜ್ಯದಲ್ಲಿ ಕಂಡು ಬರಲಿದ್ದು ಅದಕ್ಕೂ ಮುನ್ನವೇ ಈ ಒಂದು ವರ್ಗಾವಣೆಯ ಕುರಿತಂತೆ ಬದಲಾವಣೆ ಮಾಡೊದು ತುಂಬಾ ಅವಶ್ಯಕವಿದೆ.

ವರದಿ ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್ ಧಾರವಾಡ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.