ಸರ್ಕಾರಿ ಶಾಲೆಗೆ ಮಗನನ್ನು ಸೇರಿಸಿದ ಸರ್ಕಾರಿ ಶಾಲಾ ಶಿಕ್ಷಕ ಎಲ್ಲರೂ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಕರೆ ಕೊಟ್ಟ ಆ ಶಿಕ್ಷಕ…..ಒಂದು ಭಡ್ತಿ ನೀಡುವ ಕಾನೂನು ಜಾರಿಗೆ ಬರಲೆಂದರು…..

Suddi Sante Desk

ಚಿತ್ರದುರ್ಗ –

ಸಾಮಾನ್ಯವಾಗಿ ನಮ್ಮ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಪ್ರತಿಯೊಂದರಲ್ಲೂ ಹೈಟೆಕ್ ಆಗಿರುವ ಸರ್ಕಾರಿ ಶಾಲೆಗಳು ಈಗಲೂ ಕೂಡಾ ಸಾಕಷ್ಟು ಪ್ರಮಾಣ ದಲ್ಲಿ ಬೇಡಿಕೆಯನ್ನು ಇಟ್ಟುಕೊಂಡಿದ್ದು ಇದಕ್ಕೆ ಅಲ್ಲಿನ ಶಿಕ್ಷಕರ ಪರಿಶ್ರಮವೇ ಕಾರಣವಾಗಿದ್ದು ಇದರ ನಡುವೆ ಪೊಷಕರು ಅಂದ ಚಂದ ನೋಡಿ ಖಾಸಗಿ ಶಾಲೆಗಳತ್ತ ತಮ್ಮ ಮಕ್ಕಳನ್ನು ಸೇರಿಸುತ್ತಾರೆ ಮುಖ ಮಾಡುತ್ತಾರೆ ಇದೊಂದು ಕ್ರೇಜ್ ಆಗಿದ್ದು ಇದೆಲ್ಲದರ ನಡುವೆ ಇಲ್ಲೊಬ್ಬ ಸರ್ಕಾರಿ ಶಿಕ್ಷಕ ತಮ್ಮ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ‌.

ಹೌದು ಈ ಒಂದು ಮಾತಿಗೆ ಸಾಕ್ಷಿ ಚಳ್ಳಕೆರೆಯ ಸಕಾ೯ರಿ ಶಾಲಾ ಶಿಕ್ಷಕರಾದ ಎ ಚನ್ನಕೇಶವ ಅವರು. ಕ ರಾ ಪ್ರಾ ಶಾ ಶಿ ಸಂಘದ ನಿದೇ೯ಶಕರು ಆಗಿರುವ ಇವರು ತನ್ನ ಮಗನನ್ನು ಸಕಾ೯ರಿ ಶಾಲೆಗೆ ಸೇರಿಸಿ ದ್ದಾರೆ‌‌ ದಾಖಲಾತಿ ಮಾಡಿ ಪ್ರವೇಶವನ್ನು ಪಡೆದು ಕೊಂಡಿದ್ದಾರೆ‌.ಈ ಮೂಲಕ ಎಲ್ಲರೂ ಮೆಚ್ಚುವಂತಹ ಮಾದರಿ ಕೆಲಸವನ್ನು ಇವರು ಮಾಡಿದ್ದಾರೆ‌.ಇನ್ನೂ ಈ ರೀತಿ ಎಲ್ಲಾ ಸಕಾ೯ರಿ ನೌಕರರು ಶಿಕ್ಷಕರು ತಮ್ಮ ಮಕ್ಕಳನ್ನು ದಾಖಲು ಮಾಡಿದರೆ ಸಕಾ೯ರಿ ಶಾಲೆಯ ಅಸ್ತಿತ್ವವು ಉಳಿಯುವುದು ಮತ್ತು ಶಿಕ್ಷಕರು ಹೆಚ್ಚುವರಿಯಾಗುವುದಿಲ್ಲ ಕನ್ನಡವನ್ನು ಬೆಳಸಿ ಆಂಗ್ಲ ವನ್ನು ಅಭ್ಯಾಸಿಸಿ ಎಂಬ ತತ್ವದಡಿ ಈ ರೀತಿಯ ಅಂದೋಲನವಾಗಬೇಕು ಆಗ ಪ್ರಾಥಮಿಕ ಶಿಕ್ಷಣ ಬಲವದ೯ನೆಯಾಗುವುದು ಎಂದಿದ್ದಾರೆ. ಇದರೊಂದಿಗೆ ಸಕಾ೯ರಿ ನೌಕರರು ತಮ್ಮ ಮಕ್ಕಳನ್ನು 1 ನೇ ತರಗತಿಯಿಂದ 10 ನೇ ತರಗತಿಯ ವರೆಗೆ ಕಡ್ಡಾಯವಾಗಿ ಸಕಾ೯ರಿ ಶಾಲೆಗೆ ದಾಖಲಿಸಬೇಕು ಮತ್ತು ದಾಖಲಿಸಿದ ನೌಕರನಿಗೆ ಒಂದು ಇನ್ ಕ್ರಿ ಮೆಂಟ್ ನೀಡುವ ಕಾನೂನು ಜಾರಿಗೆ ತರಲಿ ಎಂದು ಒತ್ತಾಯಿಸಿ ಈ ಒಂದು ನಿಟ್ಟಿನಲ್ಲಿ ಸಕಾ೯ರಿ ನೌಕರರ ಸಂಘ ಮತ್ತು ಶಿಕ್ಷಕರ ಸಂಘಗಳ ಹೋರಾಟ ಮಾಡಲಿ ಎಂದಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.