ಮೈಸೂರು –
ಫ್ರಂಟ್ ಲೈನ್ ವರ್ಕರ್ಸ್ʼಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ರಾಜ್ಯದಲ್ಲಿ ಇಂದಿನಿಂದ ಆರಂಭವಾಗಿದ್ದು, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವ್ರು ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡರು.

ಯಾವುದೇ ಆತಂಕವಿಲ್ಲದೇ ವ್ಯಾಕ್ಸಿನ್ ಪಡೆದಿದ್ದೇನೆ. ವ್ಯಾಕ್ಸಿನೇಷನ್ ಆದ ಬಳಿಕ ಅರ್ಧಗಂಟೆ ತುರ್ತು ನಿಗಾ ಘಟಕದಲ್ಲಿ ಇದ್ದೇ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಹಾಗಾಗಿ ನಿಮ್ಮ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಲಸಿಕೆ ಪಡೆದುಕೊಳ್ಳಿ. ಇನ್ನು ಈಗಾಗಲೇ ಜಿಲ್ಲೆಯಲ್ಲಿ ಶೇ 60 ಪರ್ಸೆಂಟ್ ಕೊರೊನಾ ವಾರಿಯರ್ಸ್ ಲಸಿಕೆ ಪಡೆದಿದ್ದಾರೆ. ಸದ್ಯದಲ್ಲೇ ಶೇ 100 ರಷ್ಟು ಲಸಿಕೆ ಅಭಿಯಾನ ಪೂರ್ಣಗೊಳ್ಳಲಿದೆ’ ಎಂದರು.