ಕೆಲಸ ನಿರ್ವಹಿಸುತ್ತಲೇ ನಿಧನರಾದ ಅಕ್ಷರ ದಾಸೋಹದ ಅಧಿಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಎಎಸ್ ಅಧಿಕಾರಿಯಾಗಿದ್ದ ನಧಾಫ್ ಸಾಹೇಬ್ರು……

Suddi Sante Desk

ಶಿರಹಟ್ಟಿ –

ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ತಾಲ್ಲೂಕು ಅಕ್ಷರ ದಾಸೋಹದ ನಿರ್ದೇಶಕರಾಗಿದ್ದ ಅಧಿಕಾರಿ ಯೊಬ್ಬರು ನಿಧನರಾಗಿದ್ದಾರೆ. ಹೌದು ಶಿರಹಟ್ಟಿ ತಾಲ್ಲೂಕಿನ ಅಕ್ಷರ ದಾಸೋಹದ ನಿರ್ದೇಶಕರಾದ ಶರೀಫ್ ಸಾಬ್ ಎನ್ ನಧಾಫ್ ಇವರೇ ಮೃತರಾದ ಅಧಿಕಾರಿಯಾಗಿದ್ದಾರೆ.ಎರಡು ದಿನಗಳ ಹಿಂದೆ ಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕಾರ್ಯ ದಲ್ಲಿ ತೊಡಗಿದ್ದ ಸಮಯದಲ್ಲಿ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿತು.

ಕೂಡಲೇ ತಾಲ್ಲೂಕಿನ ಆಸ್ಪತ್ರಗೆ ಕರೆದುಕೊಂಡು ಹೋಗಿ ದಾಖಲು ಮಾಡಲಾಯಿತು. ನಂತರ ಧಾರವಾಡದ ಎಸ್ ಡಿಎಮ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಯಿತು. ಇನ್ನೂ ಮೆದುಳಿಗೆ ಸ್ಟ್ರೋಕ್ ಹೊಡೆದ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ. ಇನ್ನೂ ಶ್ರೀಯುತರು ರೋಣ ತಾಲ್ಲೂಕಿನ ಲಕ್ಕಲಗಟ್ಟಿ ಗ್ರಾಮದವರಾಗಿದ್ದು ಸವಣೂರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಶಿಕ್ಷಣ ಇಲಾಖೆಗೆ ಸೇರಿಕೊಂಡು ಸೇವೆಯನ್ನು ಆರಂಭಿಸಿದ ಇವರು 2010 ರಲ್ಲಿ ಕೆಎಎಸ್ ಪರೀಕ್ಷೆಯನ್ನು ಬರೆದು ಪಾಸಾಗಿ ಮುಂಡರಗಿ ತಾಲ್ಲೂಕಿನ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿ ಆಯ್ಕೆಯಾಗಿ ಕೆಲ ದಿನಗಳ ನಂತರ 2017 -18 ರಲ್ಲಿ ಅಕ್ಷರ ದಾಸೋ ಹದ ಅಧಿಕಾರಿಯಾಗಿ ಶಿರಹಟ್ಟಿ ತಾಲ್ಲೂಕಿಗೆ ಆಗಮಿಸಿದ್ದರು.

ತಮ್ಮ ಕೆಲಸದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಶಿಕ್ಷಕರು ಮತ್ತು ಅಧಿಕಾರಿಗಳೊಂದಿಗೆ ಮತ್ತು ಮಕ್ಕಳೊಂದಿಗೆ ಸ್ನೇಹಪರ ಭಾವವನ್ನು ಹೊಂದಿದವರಾಗಿದ್ದರು.ಯುವ ಉತ್ಸಾಹಿ ಅಧಿಕಾರಿ ಯಾಗಿದ್ದ ಎಲ್ಲರಿಗೂ ಅಚ್ಚುಮೆಚ್ಚಿನ ಅಧಿಕಾರಿಯಾ ಗಿದ್ದ ಇವರ ನಿಧನದ ಸುದ್ದಿ ಶಿಕ್ಷಕ ಬಳಗಕ್ಕೆ ಇಲಾಖೆ ಗೆ ನಂಬಲಾರದಂತಹ ಆಘಾತವನ್ನು ನೀಡಿದೆ. ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟವಾಗಿದ್ದು ಅವರ ಆತ್ಮಕ್ಕೆ ತಾಲ್ಲೂಕಿನ ಜಿಲ್ಲೆಯ ಮತ್ತು ನಾಡಿನ ಶಿಕ್ಷಕರು ಚಿರಶಾಂತಿಯನ್ನು ಕೊರಿದ್ದಾರೆ.ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕಿನ ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸಂತಾಪವನ್ನೂ ಸೂಚಿಸಿದ್ದಾರೆ.ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ.ಶಿಕ್ಷಣಾಧಿಕಾರಿಗಳು ಆರ್ ಎಸ್ ಬುರಡಿ ಸಮನ್ವಯಾಧಿಕಾರಿಗಳು ನದಾಫ್ ಅವರು,ಸಮಸ್ತ ಗುರು ಬಳಕ ಸಂತಾಪವನ್ನು ಸೂಚಿಸಿದ್ದಾರೆ. ಇವರೊಂದಿಗೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಂಧುಗಳಾದ ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಕೆ ಬಿ ಕುರಹಟ್ಟಿ ಪಿ ಎಸ್ ಅಂಕಲಿ ಡಾ, ಲಕ್ಷ್ಮಣ ಕೆ ಎಂ, ಶಂಕರ ಘಟ್ಟಿ, ಶರಣು ಪೂಜಾರ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ, ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ,ಎಂ ವಿ ಕುಸುಮ.ಜಿ, ಟಿ, ಲಕ್ಷ್ಮೀದೇ ವಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ,ನಾಗರಾಜ ಕಾಮನ ಹಳ್ಳಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ,, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಎನ್ ಎಂ ಕುಕನೂರ ಶಶಿಕಾಂತ ಶಿಂಗೆ ಸುನೀಲ ಮಲ್ಕೇಡ, ಎಂಡಿರಫೀಕ,ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ರುದ್ರೇಶ ಕುರ್ಲಿ, ಶಿವಾನಂದ ಬೆಂಚಿಕೇರಿ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಮಲ್ಲಿಕಾರ್ಜುನ ಜಿ ಚರಂತಿಮಠ ಬೈಲಹೊಂಗಲ, ಕೋಲಾರ ಶ್ರೀನಿವಾಸ,ಕೆ ಎಮ್ ಮುನವಳ್ಳಿ ಬಿ ವಿ ಅಂಗಡಿ ಎಸ್ ಸಿ ಹೊಳೆಯಣ್ಣವರ ಶಿವಾನಂದ ಬೆಂಚಿಕೇರಿ. ಪ್ರವೀಣ ಪಾಳೇಕರ,ನೆಲಮಂಗಲ ಮಲ್ಲಿಕಾರ್ಜುನ,, ಎಸ್ ಎ ಜಾಧವ ಎಸ್ ಎಸ್ ಧನಿಗೊಂಡ, ಸಾವಿತ್ರಿ ಜಾಲಿಮರದ, ಸುಸ್ಮಾ ನರ್ಚಿ ಸೇರಿದಂತೆ ಹಲವಾರು ಶಿಕ್ಷಕ ಬಂಧುಗಳು ಭಾವಪೂರ್ಣ ನಮನಗಳೊಂ ದಿಗೆ ಸಂತಾಪವನ್ನು ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.