ಫಾದರ್ಸ್ ದಿನದಂದು ತಂದೆ ಮಗಳ ಕಲಹ – ತಂದೆಯ ಮನಸ್ತಾಪದಿಂದಾಗಿ ಮಗಳು ಆತ್ಮಹತ್ಯೆ ಮಗಳ ಸಾವಿನ ಸುದ್ದಿ ತಿಳಿದು ತಂದೆಗೆ ಹೃದಯಾಘಾತ ದಿಂದ ಸಾವು…..

Suddi Sante Desk

ಮಂಡ್ಯ –

ಶಾಲೆಗೆ ಸೇರಿಸುವ ವಿಚಾರ ಕುರಿತಂತೆ ತಂದೆಯೊಂ ದಿಗೆ ಮಗಳೊಬ್ಬಳು ಮನಸ್ತಾಪಗೊಂಡು ಆತ್ಮಹತ್ಯೆ ಮಾಡಿಕೊಂಡು ನಂತರ ಮಗಳ ಸಾವಿನ ಸುದ್ದಿ ತಿಳಿದು ತಂದೆಯೂ ಕೂಡಾ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಯ ತಳಗವಾದಿ ಗ್ರಾಮದಲ್ಲಿ ನಡೆದಿದೆ.ತಂದೆ ಮಗ ಳಿಗೆ ಮನಸ್ತಾಪದಿಂದ ಮಗಳು ನೇಣಿಗೆ ಶರಣಾಗಿ ದ್ದು ವಿಷಯ ತಿಳಿದು ತಂದೆಯೂ ಹೃದಯಾಘಾತ ದಿಂದ ಸಾವನ್ನಿಪ್ಪಿದ್ದಾರೆ.

ತಳಗವಾದಿ ಗ್ರಾಮದ ಕೆ.ರಾಜು 65, ರಾಜು ಪುತ್ರಿ ಟಿ.ಆರ್ ಬಾಂಧವ್ಯ 17 ಮೃತಪಟ್ಟವವರಾಗಿದ್ದಾರೆ. ಇನ್ನೂ ಕೆ.ರಾಜುರವರಿಗೆ ನಾಲ್ಕನೇ ಮಗಳು ಬಾಂಧ ವ್ಯ ಇವಳನ್ನು ಇವರ ಸಂಭಂಧಿಕರೇ ದತ್ತು ತಗೆದು ಕೊಂಡಿದ್ದರು.ಈವರೆಗೆ ಅವರ ಮನೆಯಲ್ಲಿದ್ದು ಕೊಂಡು ಶಾಲೆಗೆ ಹೋಗುತ್ತಿದ್ದ ಬಾಂಧವ್ಯ ಅವಳಿಗೆ ಈ ಬಾರಿ ನಮ್ಮ ಆರ್ಥಿಕ ಪರಸ್ಥಿತಿ ಸರಿಯಾಗಿಲ್ಲ ಸೋ ಹೀಗಾಗಿ ಶಾಲೆಗೆ ಸೇರಿಸುವ ಸಂಬಂಧ ನಿಮ್ಮ ತಂದೆಯವರಿಗೆ ಹೇಳಿ ಮಾತನಾಡಿ ಎಂದಿದ್ದಾರೆ.

ಅವರ ಮಾತನ್ನು ಕೇಳಿದ ಬಾಂಧವ್ಯ ನಿನ್ನೆ ರಾತ್ರಿ ಮನಗೆ ಬಂದು ತಂದೆಯನ್ನು ಬಂದು ಕೇಳಿದ್ದಾರೆ ಸರಿ ಈ ಬಾರಿ ಸರ್ಕಾರಿ ಕಾಲೇಜಿಗೆ ಸೇರಿಸಿದರಾ ಯಿತು ಎಂದಿದ್ದಾರೆ.ಇದರಿಂದ ಈ ಒಂದು ವಿಚಾರ ಕ್ಕಾಗಿ ತಂದೆ ಮಗಳ ನಡುವೆ ಮನಸ್ತಾಪ ಉಂಟಾಗಿ ಇಬ್ಬರ ನಡುವೆ ಮುನಿಸಿಕೊಂಡು ರಾತ್ರಿ ವೇಳೆಯಲ್ಲಿ ಬಾಂದವ್ಯ ಮನನೊಂದ ಮನೆಯಲ್ಲಿ ನೇಣಿಗೆ ಶರ ಣಾಗಿದ್ದಾಳೆ.ಇನ್ನೂ ಈ ವಿಷಯ ರಾಜುವಿಗೆ ಗೊತ್ತಾ ಗಿ ಹೃದಯಾಘಾತವಾಗಿದ್ದು ತಕ್ಷಣ ಮಳವಳ್ಳಿ ಸಾರ್ವಜನಿಕ ಅಸ್ವತ್ರೆಗೆ ಕರೆತರುವಷ್ಟರಲ್ಲಿ ಸಾವನ್ನ ಪ್ಪಿದ್ದಾರೆ. ವಿಷಯ ತಿಳಿದ ಮಳವಳ್ಳಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂ ಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.