ಧಾರವಾಡ –
ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಸ್ವಲ್ಪದರಲ್ಲೇ ಸ್ವಾಮಿಜಿಯೊಬ್ಬರು ಪಾರಾಗಿರುವ ಘಟನೆ ಧಾರವಾಡದ ಸತ್ತೂರು ಬಳಿ ನಡೆದಿದೆ.

ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ BRTS ರಸ್ತೆಯಲ್ಲಿ ಕಾರೊಂದು ಬರುತ್ತಿತ್ತು ಸತ್ತೂರು ಬಳಿ BRTS ರಸ್ತೆಯಿಂದ ಪಕ್ಕದ ರಸ್ತೆಗೆ ಬರುವಾಗ ಈ ಕಡೆಯಿಂದ ವೇಗವಾಗಿ ಬಂದ ಕಾರೊಂದು ಈ ಕಾರಿಗೆ ಗುದ್ದಿಕೊಂಡು ಹೋಗಿದೆ.

ಈ ಕಾರಿಗೆ ಗುದ್ದಿಕೊಂಡು ಚಾಲಕ ಎಸ್ಕೇಪ್ ಆಗಿದ್ದಾರೆ. ಇನ್ನೂ ಈ ಕಾರಿನಲ್ಲಿ ಗುಲಬರ್ಗಾ ದ ರಾಮಕೃಷ್ಣ ಆಶ್ರಮದ ಮಹೇಶ್ವರನ್ ಸ್ವಾಮಿಜಿ ಮತ್ತು ಇವರೊಂದಿಗೆ ಇನ್ನೊಬ್ಬ ಸ್ವಾಮೀಜಿ ಅವರು ಧಾರವಾಡದ ರಾಮಕೃಷ್ಣ ಆಶ್ರಮಕ್ಕೆ ಬರತಾ ಇದ್ದರು. ಸ್ವಲ್ಪದರಲ್ಲೇ ದೊಡ್ಡ ಅವಘಡ ತಪ್ಪಿದಂತಾಗಿದೆ.

ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರಿನ ಮುಂದಿನ ಭಾಗ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ ಇನ್ನೂ ಅದೃಷ್ಟ ಚನ್ನಾಗಿ ಇದ್ದಿದ್ದು ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ.

ಇನ್ನೂ ಅಪಘಾತದ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ASI M A ನಮಾಜೆ,ಸಿಬ್ಬಂದಿ ಗಳಾದ ಮಹಾಂತೇಶ ಶೇತಸಂಧಿ,ಮಲ್ಲೇಶ ಲಮಾಣಿ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡರು. ಅಪಘಾತ ಮಾಡಿ ಪಾರಾಗಿರುವ ಕಾರಿನ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.






















