ಬೆಂಗಳೂರು –
ಕೊನೆಗೂ ರಾಜ್ಯ ಸರ್ಕಾರ ರಾಜ್ಯ ಸಾರಿಗೆ ನೌಕರರ ಧ್ವನಿಗೆ ಸಮಸ್ಯೆಗೆ ಸ್ಪಂದಿಸಿದೆ. ಮುಷ್ಕರದ ಮೂಲಕ ಸರ್ಕಾರದ ಮುಂದೆ ಸಲ್ಲಿಸಿದ್ದಂತ 9 ಬೇಡಿಕೆಗಳಲ್ಲಿ ರಾಜ್ಯ ಸರ್ಕಾರ 5 ಬೇಡಿಕೆಗಳನ್ನು ಈಡೇರಿಸಿ ಸುತ್ತೋಲೆ ಹೊರಡಿಸಿದೆ.ಇನ್ನೂ ಇದರಿಂದ ಅಲ್ಪ ಮಟ್ಟಿಗಾದರೂ ಸಾರಿಗೆ ನೌಕರರಿಗೆ ಜಯ ಸಿಕ್ಕಂತಾಗಿದೆ.

ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ಸುತ್ತೋಲೆ ಹೊರಡಿಸಿದ್ದು, ಸಾರಿಗೆ ನೌಕರರ ಬೇಡಿಕೆಗಳ ಮೇಲೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಈ ಕೆಳಕಂಡ ಬೇಡಿಕೆಗಳನ್ನು ನಾಲ್ಕೂ ಸಂಸ್ಥೆಗಳ ಹಂತದಲ್ಲಿ ಜಾರಿಗೊಳಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಅನುಮೋದನೆ ನೀಡಿದೆ. ಜಾರಿಗೊಳಿಸಿದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಮ್ಮನ್ನು ಕೋರಲು ನಿರ್ದೇಶಿಸಲ್ಪಟ್ಟಿದ್ದಾರೆ.

ರಾಜ್ಯ ಸರ್ಕಾರ ಈಡೇರಿಸಿರುವಂತ ಸಾರಿಗೆ ನೌಕರರ 5 ಬೇಡಿಕೆಗಳು ಹೀಗಿವೆ.
- ಆರೋಗ್ಯ ಭಾಗ್ಯ ವಿಮಾ ಯೋಜನೆ
- ಕೋವಿಡ್-19 ಸೋಂಕು ತಗುಲಿದ ನಿಗಮದ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಸರ್ಕಾರಿ ನೌಕರರಿಗೆ ನೀಡಿದಂತೆ ಸಂಸ್ಥೆಯ ಆಂತರಿಕ ಸಂಪನ್ಮೂಲಗಳಿಂದ ರೂ.30 ಲಕ್ಷಗಳ ಪರಿಹಾರವನ್ನು ನೀಡುವುದು
- ಸಾರಿಗೆ ಸಂಸ್ಥೆಗಳಲ್ಲಿ ಹೆಚ್ ಆರ್ ಎಂ ಎಸ್ ವ್ಯವಸ್ಥೆಯನ್ನು ಜಾರಿಗೊಳಿಸುವುದು
- ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆಯನ್ನು ರೂಪಿಸುವುದು
- NINC ಬದಲಾಗಿ ಪರ್ಯಾಯಯ ವ್ಯವಸ್ಥೆ ಜಾರಿಗೊಳಿಸುವುದು

ಈ ಮೇಲ್ಕಂಡ ಐದು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿ ಸುತ್ತೋಲೆಯಲ್ಲಿ ತಿಳಿಸಿದೆ. ಉಳಿದಂತೆ ಇತರೆ ಬೇಡಿಕೆಗಳ ಶೀಘ್ರದಲ್ಲೇ ಚರ್ಚಿಸಿ ನಿರ್ಧರಿಸಲು ಭರವಸೆ ನೀಡಿದ್ದಾರೆ.