ಧಾರವಾಡ –
ಸಾಲಬಾಧೆಯಿಂದ ಯುವ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ.ಸುಭಾಷ ಸಣ್ಣಮನಿ (34) ಎಂಬಾತನೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ.

ಶಿರೂರು ಗ್ರಾಮದ ವಿಜಯಾ ಬ್ಯಾಂಕ್ ಮತ್ತು ವಿವಿಧೆಡೆಯ ಫೈನಾನ್ಸ್ ಗಳಲ್ಲಿ ಸುಭಾಷ ಸುಮಾರು 17 ಲಕ್ಷಕ್ಕೂ ಅಧಿಕ ಕೃಷಿ ಸಾಲ ಪಡೆದುಕೊಂಡಿದ್ದ.

ಈ ಸಾಲ ತೀರಿಸಲಾಗದೇ ನಿನ್ನೆ ರಾತ್ರಿ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ.ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.