ಧಾರವಾಡ –
ಧಾರವಾಡದ ಗಾಂಧಿ ಚೌಕದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಸಿ.ಸಿ ರೋಡ ಮಾಡಿ ಈವರೆಗೆ ಪಾದಾಚಾರಿ ಮಾರ್ಗ ಹಾಗೂ ರಸ್ತೆ ತಡೆಗಳ ತೆಗ್ಗುಗಳನ್ನು ಸರಿ ಮಾಡದಿರುವುದಕ್ಕೆ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.

ವಿನಾಕಾರಣ ವಿಳಂಬ ಮಾಡುತ್ತಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಯಿತು.

ಈ ಕುರಿತು ಸ್ಥಳಿಯ ಶಾಸಕರಿಗೆ ಉಸ್ತುವಾರಿ ಸಚಿವರಿಗೆ ಸಾರ್ವಜನಿಕರು ಹೇಳಿದರು ಈವರೆಗೆ ಸ್ಪಂದಿಸದ ಹಿನ್ನಲೆಯಲ್ಲಿ ಇಂದು ಪ್ರತಿಭಟನೆ ಮಾಡಲಾಯಿತು.

ಬಸವರಾಜ ಜಾಧವ ನೇತೃತ್ವದಲ್ಲಿ ಈ ಒಂದು ಪ್ರತಿಭಟನೆ ಮಾಡಲಾಯಿತು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳಿಯ ಶಾಸಕರು ಇತ್ತ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಲಾಯಿಸಲಾಯಿತು.

ಇನ್ನೂ ಪ್ರತಿಭಟನಾ ಸ್ಥಳಕ್ಕೆಸಹಾಯಕ ಆಯುಕ್ತರು ಆಗಮಿಸಿದ 10 ರಿಂದ15 ದಿನಗಳಲ್ಲಿ ಕೆಲಸವನ್ನು ಮಾಡಿ ಕೋಡುತ್ತೇವೆ ಎಂದು ಆಶ್ವಾಸನೆ ನೀಡಿದರು.ಪ್ರತಿಭಟನೆಯಲ್ಲಿ ಬಸವರಾಜ ಜಾಧವ ಸೋಮೇಶ ಕವಳಿ ,ಉಮೇಶ್ ಗೋತ್ರಾಳೆ, ರಘು ಬಡಿಗೇರ, ಪ್ರತೀಕ ತೋಟದವರ ,ರವಿ ಜಾಧವ, ಪಾಲನಕರ ಬಸು, ಎಲಿಗಾರ ಹಿದಾಯತ್, ರಾಯಚೂರು ಸಾಹೀಲ್ ಕಿತ್ತೊರ ,ಪ್ರಕಾಶ್ ದೊಡವಾಡ ಸೇರಿದಂತೆ ಹಲವರು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.