ಧಾರವಾಡ
ಯೋಗೀಶಗೌಡ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ ಮೇಲಿನ ಸಾಕ್ಷ್ಯನಾಶ ಪ್ರಕರಣವೂ ಈಗ ಬೆಂಗಳೂರಿಗೆ ಶಿಫ್ಟ್ ಆಗಿದೆ.ಈಗಾಗಲೇ ಸಿಬಿಐನಿಂದ ಬಂಧನಕ್ಕೊಳ ಗಾಗಿರೋ ಮಾಜಿ ಸಚಿವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.ಸಾಕ್ಷಿ ನಾಶದ ಪ್ರಕರಣ ಧಾರವಾಡದ ಪ್ರಧಾನ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿತ್ತು.
ಈ ಒಂದು ಪ್ರಕರಣವನ್ನು ಕೇಸ್ ಬೆಂಗಳೂರಿನ ಜನ ಪ್ರತಿ ನಿಧಿಗಳ ಕೋರ್ಟ್‌ಗೆ ಶಿಫ್ಟ್ ಮಾಡುವಂತೆ ವಿನಯ ಕುಲಕರ್ಣಿ ಪರ ವಕೀಲರು ಕೇಳಿಕೊಂಡಿ ದ್ದರು ಹೀಗಾಗಿ ವಿಚಾರಣೆ ಮಾಡಿದ ಧಾರವಾಡದ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಮಾಡಿದೆ. ವಿನಯ ಪರ ವಕೀಲರ ಮನವಿಗೆ ಕಳೆದ ವಾರ ಸಿಬಿಐ ನ್ಯಾಯಾಲಯದ ಕೇಸ್ ಕೂಡ ಶಿಫ್ಟ್ ಆಗಿತ್ತು ಈಗ ಸಾಕ್ಷ್ಯನಾಶ ಕೇಸ್ ಸಹ ವರ್ಗವಾಗಿದೆ ಎರಡೂ ಕೇಸ್ ಜನಪ್ರತಿನಿಧಿಗಳ ಕೋರ್ಟ್‌ಗೆ ವರ್ಗಾವಣೆಯಾದಂತಾಗಿವೆ.




















