ಚಿಕ್ಕಬಳ್ಳಾಪುರ –
ಮಧ್ಯವನ್ನು ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಮದ್ಯ ಸಂಗ್ರಹಣಾ ಗೋದಾಮಿನಿಂದ ಗೌರಿಬಿದನೂರಿನ ಕೆಲವು ಅಂಗಡಿಗಳಿಗೆ ಸರಬರಾಜು ಉದ್ದೇಶದಿಂದ ತಗೆದುಕೊಂಡು ಹೋಗಲಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಕಣಿವೆಯ ಬಳಿ ಈ ಒಂದು ಘಟನೆ ನಡೆದಿದೆ. ಮದ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಕೂಡಲೇ ಸುತ್ತಮುತ್ತಲಿನ ಹತ್ತಾರು ಗ್ರಾಮದ ಜನತೆ ನಾ…ಮುಂದು, ತಾ…ಮುಂದು ಎನ್ನುವಂತೆ ಪಲ್ಟಿಯಾದ ಲಾರಿಯೊಳಗೆ ಹತ್ತಿ ತಮಗೆ ಬೇಕಾದ ಮದ್ಯವನ್ನು ಕದಿಯಲು ಶುರುಮಾಡಿ ತಗೆದುಕೊಂಡು ಹೋದರು.

ಇನ್ನೂ ಕೆಲವು ಮಂದಿ ಮದ್ಯದ ಬಾಟಲಿಗಳನ್ನು ಚೀಲದಲ್ಲಿ ತುಂಬಿಸಿಕೊಂಡ ಘಟನೆ ಕೂಡ ನಡೆದಿದೆ ಎನ್ನಲಾಗಿದ್ದು, ಬಿಟ್ಟಿ ಸಿಕ್ಕರೆ ನನಗೂ ಇರಲಿ ನಮ್ಮ ವಂಶಕ್ಕೂ ಇರಲಿ ಅನ್ನೀ ರೀತಿಯಲ್ಲಿ ಈ ಜನತೆ ನಡೆದುಕೊಂಡಿದ್ದಾರಂತೆ.

ಟೆಂಪೋದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯದ ಪಾಕೆಟ್, ಬಿಯರ್ ಬಾಟಲಿಗಳು ಇದ್ದವು. 10 ಲಕ್ಷ ರೂಪಾಯಿ ಮೌಲ್ಯದ ಮದ್ಯ ಹಾಳಾಗಿದೆ ಎನ್ನಲಾಗಿದ್ದು ಘಟನ ಸ್ಥಳಕ್ಕೆ ಸ್ಥಳೀಯ ಪೋಲಿಸರು ಹಾಗೂ ಹಿರಿಯ ಅಬಕಾರಿ ಅಧಿಕಾರಿ ಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ

ಬಾಟಲಿಗಳ ನಡುವೆ ಟೆಂಪೋದಲ್ಲಿ ಚಾಲಕ ಸಿಕ್ಕಿಬಿದ್ದ ಪರಿಣಾಮ ಅವರನ್ನು ಹೊರತಗೆಯಲು ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.