ಬೆಂಗಳೂರು –
ಕಳೆದ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ತಪ್ಪು ಆಸ್ತಿ ವಿವರ ಸಲ್ಲಿಸಿರುವ ಸಂಬಂಧ ತನಿಖೆ ನಡೆಸಲು ರಾಜ್ಯಪಾಲರಿಗೆ ಕೋರಲಾಗಿದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಹೀಗಾಗಿ ಸಚಿವ ನಾರಾಯಣಗೌಡಗೆ ಈಗ ಸಂಕಷ್ಟ ಎದುರಾಗಿದೆ.

ಸಚಿವ ನಾರಾಯಣಗೌಡ ಚುನಾವಣಾ ಆಯೋಗಕ್ಕೆ ತಪ್ಪು ಆಸ್ತಿ ವಿವರ ಸಲ್ಲಿಸಿದ್ದಾರೆ ಎಂಬುದಾಗಿ ಅವರ ವಿರುದ್ಧ ತನಿಖೆ ಕೈಗೊಳ್ಳಲು ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಎಂಬುವರು ಅನುಮತಿ ಕೋರಿದ್ದರು.

ಇವರ ಮನವಿಗೆ ಪ್ರತಿಸ್ಪಂದಿಸಿರುವ ರಾಜ್ಯಪಾಲರು, ಸಚಿವ ನಾರಾಯಣಗೌಡ ವಿರುದ್ಧ ತನಿಖೆ ನಡೆಸಲು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದೆ.ಹೀಗಾಗಿ ಸಚಿವ ನಾರಾಯಣಗೌಡಗೆ ಸಂಕಷ್ಟ ಎದುರಾದಂತೆ ಆಗಿದೆ.ಈಗಷ್ಟೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
