ಮತ್ತೊಂದು ಮಹತ್ವದ ಆದೇಶ ಹೊರಡಿಸಲು ಮುಂದಾದ CM…..

Suddi Sante Desk

ಬೆಂಗಳೂರು –

ಮೊನ್ನೆಮೊನ್ನೆಯಷ್ಟೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ-ತುರಾಯಿ, ಬೊಕ್ಕೆ ನೀಡುವುದನ್ನು ನಿಷೇಧಿಸಿ ಅದರ ಬದಲು ಪುಸ್ತಕ ನೀಡುವಂತೆ ಸರ್ಕಾರದಿಂದ ಆದೇಶ ಹೊರಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ಮತ್ತೊಂದು ಮಹತ್ವದ ಆದೇಶ ಮಾಡಿಸಲು ಮುಂದಾಗಿದ್ದಾರೆ.ಹೌದು ಗಡಿ ಪ್ರದೇಶದಲ್ಲಿ ಭೇಟಿಯ ಸಮಯದಲ್ಲಿ ಗಾರ್ಡ್ ಆಫ್ ಆನರ್ ಬೇಡ ಎಂದಿದ್ದರು.ಸರ್ಕಾರಿ ಕಚೇರಿ ಗಳಿಗೆ ಭೇಟಿ ಕೊಟ್ಟಾಗ ಮಾತ್ರ ಗಾರ್ಡ್ ಆಫ್ ಆನರ್ ನೀಡಿ. ಉಳಿದ ಕಾರ್ಯಕ್ರಮಗಳಿಗೆ ಹಾಗೂ ಹೋಗುವಾಗ ಬರುವಾಗ ಗಾರ್ಡ್ ಆಫ್ ಆನರ್ ಬೇಡ ಅಂತ ಐಜಿಪಿಗೆ ಹೇಳಿದ್ದರು.

ಇದೀಗ ಮುಂದುವರಿದು, ಆ ಸಂಬಂಧ ಮತ್ತೊಂದು ಆದೇಶ ಹೊರಡಿಸಲು ಮುಂದಾಗಿದ್ದಾರೆ.ತಮಗೆ ಮಾತ್ರವಲ್ಲದೆ ಎಲ್ಲ ಸಚಿವರಿಗೂ ಅನ್ವಯವಾಗು ವಂತೆ ಪ್ರತಿ ಜಿಲ್ಲೆಯಲ್ಲಿ ಹಾಗೂ ಸಾರ್ವಜನಿಕ ಸ್ಥಳ ಗಳ ಭೇಟಿ ಸಂದರ್ಭದಲ್ಲಿ ಗಾರ್ಡ್ ಆಫ್ ಆನರ್ ನಿಷೇಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.