ಹುಬ್ಬಳ್ಳಿ –
ಇನ್ಸ್ಟಾಗ್ರಾಮದಲ್ಲಿ ಆ್ಯಪಲ್ ಪೊನ್ ಮಾರಾಟಕ್ಕೆ ಇದೆ ಎಂದು ಜಾಹಿರಾತನ್ನು ಹಾಕಿ ಇದನ್ನು ನೋಡಿ ಸಂಪರ್ಕ ಮಾಡಿದವರೊಂದಿಗೆ 55,000/ರೂಪಾಯಿಗೆ ವ್ಯವಹಾರ ಕುದುರಿಸಿಕೊಂಡು, ಹಣವನ್ನು ಆನ್ ಲೈನ್ ಮುಖಾಂತರ ವರ್ಗಾವಣೆ ಮಾಡಿಸಿಕೊಂಡು ಐಪೊನ್ ಕಳಿಸದೇ ಸಾದಾ ಮೊಬೈಲ್ ಫೋನ್ ಕಳಿಸಿ ವಮಚನೆ ಮಾಡಿದ ಆರೋಪಿಯನ್ನು ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೈಮ್ ಪೊಲೀಸರು ಬಂಧನ ಮಾಡಿದ್ದಾರೆ.
ಆರೋಪಿತನು ಹಣ ವರ್ಗಾವಣೆ ಮಾಡಿಸಿಕೊಂಡು ಐಪೊನ್ ಕಳಿಸದೇ ಕೋರಿಯರ್ ಮುಖಾಂತರ ಸಾದಾ ಕೀ ಪ್ಯಾಡ್ ಹ್ಯಾಂಡಸಟ್ ನ್ನು ಕಳಿಸಿ ಮೋಸ ಮಾಡಿದ ಕುರಿತು ದೂರು ನೀಡಿದ ಬೆನಯ ದೂರಿನ ಆಧಾರದ ಮೇಲೆ ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್
ಎಸ್. ಬಿ. ಮಾಳಗೊಂಡ ನೇತ್ರತ್ವದ ತಂಡವು ಕಾರ್ಯಾಚರಣೆ ಮಾಡಿ ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಉಲ್ಲಾಸನಗರದಲ್ಲಿ ಆರೋಪಿಯೊಬ್ಬನನ್ನು ಬಂಧನ ಮಾಡಿದ್ದಾರೆ.
ದೇವ ತಂದೆ ಶಂಕರ ಲಾಲವಾನಿ ,ಮಹಾರಾಷ್ಟ್ರ ಎಂಬ ಆರೋಪಿಯನ್ನು ಬಂಧನ ಮಾಡಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿದ ಓನ್ ಪ್ಲಸ್ ಕಂಪನಿಯ ಮೊಬೈಲ್ ಪೊನ್ ಜಪ್ತ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.