ಧಾರವಾಡ –
ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ವಾಹನವೊಂದು ಡಿಕ್ಕಿಯಾಗಿ ಸ್ಥಳದಲ್ಲೇ ವ್ಯಕ್ತಿಯೊಬ್ಬನು ಸಾವಿಗೀಡಾದ ಘಟನೆ ಧಾರವಾಡದ ನಿಗದಿ ಬಳಿ ನಡೆದಿದೆ. ವಿಠ್ಠಲ ಮಾರುತಿ ನವಲೆ ಎಂಬುವರು ಜಮೀನಿನಿಂದ ಮನೆಗೆ ನಡೆದುಕೊಂಡು ಹೊರಟಿದ್ದರು. ರಸ್ತೆ ಪಕ್ಕದಲ್ಲೇ ನಡೆದುಕೊಂಡು ಹೊರಟಿದ್ದ ಇವರಿಗೆ ವಾಹನವೊಂದು ಡಿಕ್ಕಿ ಹೊಡಿದೆದಿ. ತೀವ್ರವಾಗಿ ಗಾಯಗೊಂಡ ವಿಠ್ಠಲ ಸ್ಥಳದಲ್ಲೇ ಸಾವಿಗೀಡಾಗಿ ದ್ದಾರೆ. ಇನ್ನೂ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಇನ್ಸ್ಪೆಕ್ಟರ್ ಶ್ರೀಧರ ಸತಾರೆ ಮತ್ತು ಸಿಬ್ಬಂದಿಗಳು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು. ಈ ಕುರಿತಂತೆ ದೂರನ್ನು ಮೃತನ ಪತ್ನಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಅಪಘಾತ ಮಾಡಿ ಸಾವಿಗೆ ಕಾರಣವಾದ ವಾಹನದ ಕುರಿತಂತೆ ಮಾಹಿತಿಯನ್ನು ಧಾರವಾಡ ಗ್ರಾಮೀಣ ಪೊಲೀಸರು ಕಲೆಹಾಕುತ್ತಿದ್ದಾರೆ.






















