ಹಲ್ಲೆಗೊಳಗಾದ ಆ ಶಿಕ್ಷಕನಿಗೆ ಧೈರ್ಯ ತುಂಬಿದ ಮಲ್ಲಿಕಾರ್ಜುನ ಉಪ್ಪಿನ – ನೋವಿಗೆ ಸ್ಪಂದಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದ ಗ್ರಾಮೀಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ

Suddi Sante Desk

ಚಿಕ್ಕಬಳ್ಳಾಪುರ –

ಚಿಕ್ಕಬಳ್ಳಾಪುರದಲ್ಲಿ ಶಿಕ್ಷಕರೊಬ್ಬರ ಮೇಲೆ ನಡೆದ ಪುಂಡರ ಹಲ್ಲೆಯ ವಿಚಾರ ಕುರಿತಂತೆ ಸುದ್ದಿ ಸಂತೆ ವರದಿ ಪ್ರಸಾದ ಮಾಡಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ನಿಜಕ್ಕೂ ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ.

ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ

ಹೌದು ಕ್ಷುಲಕ ಕಾರಣಕ್ಕಾಗಿ ನಿನ್ನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಡೆದ ಶಿಕ್ಷಕರೊಬ್ಬರ ಮೇಲಿನ ಹಲ್ಲೆ ವಿಚಾರ ಕುರಿತಂತೆ ಯಾರು ಕೂಡಾ ಧ್ವನಿ ಎತ್ತಲಿಲ್ಲ.ರಾಜ್ಯ ಘಟಕದ ನಾಯಕರು ಸೇರಿದಂತೆ ಯಾರು ಕೂಡಾ ಮಾತನಾಡಲಿಲ್ಲ ಸ್ಪಂದಿಸಲಿಲ್ಲ ಸುಮ್ಮನೇ ಮನವಿ ಅಂತಾ ಒಂದು ಬರೆದು ಪ್ರಚಾರ ವನ್ನು ತಗೆದುಕೊಂಡಿದ್ದನ್ನು ಬಿಟ್ಟರೇ ನೋವಿನಲ್ಲಿ ರುವ ಶಿಕ್ಷಕ ರಾಜಕುಮಾರನಿಗೆ ಯಾರು ಕೂಡಾ ಒಂದು ಸಾಂತ್ವನದ ಮಾತು ಹೇಳಲಿಲ್ಲ ಕೇಳಿಲಿಲ್ಲ ಮಾತನಾಡಲಿಲ್ಲ ಸ್ಪಂದಿಸಲಿಲ್ಲ ಈ ಕುರಿತಂತೆಯೂ ಕೂಡಾ ನಿಮ್ಮ ಸುದ್ದಿ ಸಂತೆ ಬೆಳಕನ್ನು ಚೆಲ್ಲಿತು. ಇ

ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ

ಇದೇಲ್ಲ ವರದಿ ಪ್ರಸಾರವಾಗುತ್ತಿದ್ದಂತೆ ನಿಜವಾಗಿ ಯೂ ಕೂಡಾ ಶಿಕ್ಷಕರಾಗಿರುವ ಹಾಗೇ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ದ ಪ್ರಧಾನ ಕಾರ್ಯದರ್ಶಿಯಾಗಿರುವ ಮಲ್ಲಿಕಾ ರ್ಜುನ ಉಪ್ಪಿನ ಅವರು ಮೆಚ್ಚುವಂತಹ ಕೆಲಸ ವನ್ನು ಮಾಡಿದ್ದಾರೆ.

ಶಿಕ್ಷಕ ರಾಜಕುಮಾರ

ರಾಜಕುಮಾರ ಅವರು ಖಾಸಗಿ ಶಾಲೆಯ ಶಿಕ್ಷಕ ನಿಜ ಆದರೆ ವೃತ್ತಿಯಲ್ಲಿ ನಮ್ಮವರು ಎಂದುಕೊಂಡು ಅವರ ನೋವಿಗೆ ಸ್ಪಂದಿಸಿದ್ದಾರೆ.ಸುದ್ದಿ ಸಂತೆಯಲ್ಲಿ ವರದಿ ಪ್ರಸಾರವಾಗುತ್ತಿದ್ತಂತೆ ಕೂಡಲೇ ಚಿಕ್ಕಬಳ್ಳಾ ಪುರದ ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾ ಗಿರುವ ನಾರಾಯಣಸ್ವಾಮಿ ಅವರನ್ನು ಸಂಪರ್ಕ ಮಾಡಿ ಸಮಗ್ರವಾದ ಮಾಹಿತಿಯನ್ನು ತಗೆದುಕೊಂ ಡು ಬಿಇಓ ಅವರಿಗೆ ಮಾತನಾಡಿದ್ದಾರೆ.

ಸಾಲದಂತೆ ಶಿಕ್ಷಕ ರಾಜಕುಮಾರ ಅವರ ದೂರ ವಾಣಿ ಸಂಖ್ಯೆಯನ್ನು ತಗೆದುಕೊಂಡು ಸಂಪರ್ಕ ಮಾಡಿ ಮಾತನಾಡಿ ಮಾಹಿತಿಯನ್ನು ತಗೆದುಕೊಂ ಡು ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಯಾರಿಗೂ ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಏನೇ ಇದ್ದರೂ ನಮಗೆ ಹೇಳಿ ಎಂಬ ಮಾತನ್ನು ಹೇಳಿದ್ದಾರೆ.ಅತ್ತ ಶಿಕ್ಷಕ ರಾಜಕುಮಾರ ಕೂಡಾ ಸರ್ ಯಾರು ಕೇಳಲಿಲ್ಲ ನಮ್ಮ ಶಾಲೆಯವರು ಕೇಳಲಿಲ್ಲ ದೂರದಿಂದ ನೀವು ಕೇಳಿದ್ದು ತುಂಬಾ ಸಂತೋಷ ಆಯಿತು ಸರ್ ಎಂದಿದ್ದಾರೆ.

ಹೀಗಾಗಿ ರಾಜಕುಮಾರ ಒಬ್ಬರು ಖಾಸಗಿ ಶಾಲಾ ಶಿಕ್ಷಕ ಎಂಬುದನ್ನು ಬದಿಗಿಟ್ಟು ವೃತ್ತಿಯಲ್ಲಿ ಅವರು ಕೂಡಾ ಒಬ್ಬರು ಖಾಸಗಿ ಶಾಲಾ ಶಿಕ್ಷಕ ಎಂಬ ಕಾರಣಕ್ಕಾಗಿ ರಾಜ್ಯ ಘಟಕದ ಗೌರವದ ಹುದ್ದೆಯಲ್ಲಿ ರುವ ಮಲ್ಲಿಕಾರ್ಜುನ ಉಪ್ಪಿನ ಮತ್ತು ಚಿಕ್ಕಬಳ್ಳಾಪು ರದ ಜಿಲ್ಲಾಧ್ಯಕ್ಷರಾಗಿರುವ ನಾರಾಯಣಸ್ವಾಮಿ ಅವರು ನಿಜವಾಗಿಯೂ ಹೇಳದೆ ಕೆಲಸ ಮಾಡಿದ್ದು ನಿಜವಾಗಿಯೂ ಮೆಚ್ಚುವಂತಹ ಕೆಲಸ.ಇನ್ನೂ ಇಷ್ಟೇಲ್ಲಾ ಮಾಡಿದರು ಕೂಡಾ ಎಲ್ಲಿಯೂ ಹೇಳಿ ಕೊಂಡಿಲ್ಲ ಪ್ರಚಾರ ತಗೆದುಕೊಂಡಿಲ್ಲ ಇದು ನಿಜವಾ ದ ಜವಾಬ್ದಾರಿಯ ಕೆಲಸ ಹಲ್ಲೆಗೊಳಗಾಗಿ ನೋವಿನ ಲ್ಲಿದ್ದ ಶಿಕ್ಷಕನಿಗೆ ಸ್ಪಂದಿಸಿದ ಇವರಿಗೆ ನಾಡಿನ ಶಿಕ್ಷಕರ ಪರವಾಗಿ ಅದರಲ್ಲೂ ಸುದ್ದಿ ಸಂತೆಯ ಟೀಮ್ ಪರವಾಗಿ ಧನ್ಯವಾದಗಳು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.