ಬೆಂಗಳೂರು –
ಶಿಕ್ಷಕರ ಬಡ್ತಿಗೆ ದೊಡ್ಡ ಪೆಟ್ಟು – ಅನ್ಯಾಯದ ವಿರುದ್ದ ಸಿಡಿದೆದ್ದ ರಾಜ್ಯದ PST ಶಿಕ್ಷಕರು ರಾಜ್ಯಾದ್ಯಂತ ಜೋರಾಗುತ್ತಿದೆ ಹೋರಾಟದ ಕಾವು…..
ರಾಜ್ಯದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಪಿಎಸ್ ಟಿ ಶಿಕ್ಷಕರು ರಾಜ್ಯ ಮಟ್ಟದ ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ. ಹೌದು ಬಡ್ತಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ದ ಸಿಡಿದೆದ್ದಿರುವ ಶಿಕ್ಷಕರು ಆಗಸ್ಟ್ 12 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಈ ಒಂದು ಹೋರಾಟವು ನಡೆಯಲಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಪಿಎಸ್ ಟಿ ಶಿಕ್ಷಕರು ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ.
ಇನ್ನೂ ಶಿಕ್ಷಕರ ಬಡ್ತಿಗೆ ದೊಡ್ಡದಾದ ಪೆಟ್ಟನ್ನು ನೀಡಲಾಗಿದ್ದು 2016ಕ್ಕೂ ಮುಂಚೆ 1-7 ಮತ್ತು 8ಕ್ಕೆ ನೇಮಕ ಹೊಂದಿದ್ದ ಶಿಕ್ಷಕರನ್ನು ಪಿಎಸ್ಟಿ ಎಂದು ಪದನಾಮ ಮಾಡಿ 1-5ಕ್ಕೆ ಸೀಮಿತಗೊ ಳಿಸಿ ಹಿಂಬಡ್ತಿ ನೀಡಲಾಗಿದೆ.6-8ನೇ ತರಗತಿ ಬೋಧನೆಗೆಂದು ಜಿಪಿಟಿ ಎಂಬ ಹೊಸ ವೃಂದ ಸೃಜಿಸಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ.
ಇದು ಸೇವಾನಿತರ ಪಿಎಸ್ಟಿ ಶಿಕ್ಷಕರ ಸೇವೆ ಮತ್ತು ವಿದ್ಯಾರ್ಹತೆ ನಿರ್ಲಕ್ಷಿಸಿ ಹಿಂಬಡ್ತಿ ನೀಡಿದ್ದು ಸಾಂವಿಧಾನಿಕ ಆಶಯ ಉಲ್ಲಂಘಿಸಲಾಗಿದೆ ಶಿಕ್ಷಣ ಇಲಾಖೆ ಈ ಕ್ರಮದಿಂದ ಶಿಕ್ಷಕರಿಗೆ ಸೇವಾ ಜೇಷ್ಠತೆ,ಕಾಲಮಿತಿ ಬಡ್ತಿ,ಸ್ವಯಂ ಚಾಲಿತ ಬಡ್ತಿ, ಮುಖ್ಯ ಶಿಕ್ಷಕರ ಬಡ್ತಿ, ಪ್ರೌಢಶಾಲೆ ಶಿಕ್ಷಕರ ಬಡ್ತಿ ಹಾಗೂ ವರ್ಗಾವಣೆಯಲ್ಲಿ ಅನ್ಯಾಯವಾಗಿದೆ.
ಈವರೆಗೆ ಬಿ.ಎಡ್ ಅರ್ಹತೆ ಪಡೆದ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ ಕೊಡುವ ನಿಯಮವಿತ್ತು ಆದರೆ ಈಗ 1-7 ಮತ್ತು 8 ಶಿಕ್ಷಕರನ್ನು 1-5 ತರಗತಿ ಬೋಧನೆಗೆ ಇಳಿಸಿ ಕಡಿಮೆ ವೇತನ ಶ್ರೇಣಿಯ ಹುದ್ದೆಯಾದ 6-8ನೇ ತರಗತಿ ಬೋಧನೆಗೆ ಬಡ್ತಿ ನೀಡುತ್ತೇವೆ ಎನ್ನುತ್ತಿರುವುದ ರಿಂದ ಈಗಾಗಲೇ 1-7 ಮತ್ತು 8ನೇ ತರಗತಿ ಬೋಧನೆ ಮಾಡುತ್ತಿದ್ದ ಶಿಕ್ಷಕರಿಗೆ ಹಿಂಬಡ್ತಿಯಾ ಗಿದೆ ಹೀಗಾಗಿ
ಸಧ್ಯ ರಾಜ್ಯದಲ್ಲಿನ ಪಿಎಸ್ ಟಿ ಶಿಕ್ಷಕರು ತಮಗೆ ಆಗಿರುವ ಅನ್ಯಾಯದ ವಿರುದ್ದ ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿ ಹೋರಾಟವನ್ನು ಮಾಡಲು ಮುಂದಾಗಿದ್ದು ಶಿಕ್ಷಕರು ಬೀದಿಗಿಳಿ ಯುವ ಮುನ್ನವೇ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಈ ಒಂದು ಕುರಿತಂತೆ ಸಂದಿಸುತ್ತದೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..